ಕಾಸರಗೋಡು: ರಾಷ್ಟ್ರೀಯ ಅಧ್ಯಾಪಕ ಪರಿಷತ್(ಎನ್‍ಟಿಯು)47ನೇ ಕೇರಳ ರಾಜ್ಯ ಸಮ್ಮೇಳನಕ್ಕೆ ಕಾಸರಗೋಡು ನಗರಸಭಾಂಗಣದ'ಜಯಕೃಷ್ಣನ್ ಮಾಸ್ಟರ್ ನಗರ'ದಲ್ಲಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು. ಎನ್‍ಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಕೆ. ಸ್ಮಿತಾ ಧ್ವಜಾರೋಹಣ ನಡೆಸಿದರು. ಎಬಿಆರ್‍ಎಸ್‍ಎಂ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಕಪೂರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೇರಳದಲ್ಲಿ ಸಂಘರ್ಷದ ಹಾದಿಯಲ್ಲೇ ಬೆಳೆದುಬಂದಿರುವ ಎನ್‍ಟಿಯು ಸಂಘಟನೆ ಶಿಕ್ಷಕರ ಹಿತ ಕಪಾಡುವಲ್ಲಿಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು. ಗುರುಪರಂಪರೆಯಲ್ಲಿ ಶ್ರೇಷ್ಠರಾಗಿರುವ ಶಿಕ್ಷಕರಿಗೆ ಸಮಾಜ ಕಟ್ಟುವ ಮಹತ್ವದ ಜವಾಬ್ದಾರಿಯಿದೆ. ಒಂದು ಶಾಲೆ ಬದಲಾಗಬೇಕಾದರೆ, ಅಲ್ಲಿನ ಶಿಕ್ಷಕ ಪ್ರಯತ್ನಶೀಲನಾಗಬೇಕಾದ ಅನಿವಾರ್ಯತೆಯಿದೆ. ಶಿಕ್ಷಕ ಸ್ವಯಂ ಜ್ಞಾನವಂತನಾದಾಗ ಉತ್ತಮ ಶಿಷ್ಯವರ್ಗವನ್ನು ತಯಾರಿಸಲು ಸಾಧ್ಯ ಎಂದು ತಿಳಿಸಿದರು.
ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷೆ ಕೆ. ಸ್ಮಿತಾ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ದ. ಕೇರಳ ಬೌದ್ಧಿಕ್ ಪ್ರಮುಖ್ ಪಿ.ಉಣ್ಣಿಕೃಷ್ಣನ್, ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್, ಎನ್‍ಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಎ.ವಿ ಹರೀಶ್, ಕೋಶಾಧಿಕರಿ ಕೆ.ಕೆ ಗಿರೀಶ್, ರಾಜ್ಯ ಸಮಿತಿ ಸದಸ್ಯ ಗೋಪ ಕುಮಾರ್, ರಾಜ್ಯ ಸಮಿತಿ ಉಪಾಧ್ಯಕ್ಷರಾದ ಆರ್. ಜಿಗಿ, ಪಾರಂಗೋಡ್ ಬಿಜು, ಕೆ.ವಿ ಬಿಂದು ಮೊದಲಾದವರು ಉಪಸ್ಥಿತರಿದ್ದರು. ಎನ್‍ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಅನೂಪ್ ಕುಮಾರ್ ಸ್ವಾಗತಿಸಿದರು. ಈ ಸಂದರ್ಭ ನಡೆದ ಸಮನ್ವಯ ಸಭೆಯಲ್ಲಿಉತ್ತರ ಕೇರಳ ಪ್ರಾಂತ ಬೌದ್ಧಿಕ್ ಶಿಕ್ಷಣ ಪ್ರಮುಖ್ ಎಂ ಬಾಲಕೃಷ್ಣನ್ ಉದ್ಘಾಟಿಸಿದರು. ಎನ್‍ಟಿಯು ರಾಜ್ಯ ಉಪಾಧ್ಯಕ್ಷ ಕೆ. ಪ್ರಭಾಕರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು.
ಇಂದು ಔಪಚಾರಿಕ ಉದ್ಘಾಟನೆ:
ಜ.24ರಂದು ಬೆಳಗ್ಗೆ 9.30ಕ್ಕೆ ನಡೆಯುವ ಸಮಾರಂಭದಲ್ಲಿ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಮಾರಂಭವನ್ನು ಔಪಚಾರಿಕವಾಗಿ ಉದ್ಘಾಟಿಸುವರು. ಎನ್‍ಟಿಯು ರಾಜ್ಯಾಧ್ಯಕ್ಷೆ ಕೆ. ಸ್ಮಿತಾ ಅಧ್ಯಕ್ಷತೆ ವಹಿಸುವರು. ಎಬಿಆರ್‍ಎಸ್‍ಎಂ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಕಪೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಿಕ್ಷಕರ ಬೀಳ್ಕೊಡುಗೆ ಸಮಾರಂಭವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಎಂ. ಟಿ. ರಮೇಶ್ ಉದ್ಘಾಟಿಸುವರು.
ಮಧ್ಯಾಹ್ನ 2ಗಂಟೆಗೆ ನಡೆಯುವ ಶೈಕ್ಷಣಿಕ ಸಮ್ಮೇಳನವನ್ನು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರಫೆಸರ್ ಎಸ್.ಪಿ. ಅಲ್ಗೂರ್ ಉದ್ಘಾಟಿಸುವರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಭೌತಶಾಸ್ತ್ರದ ನಿರ್ದೇಶಕ ಶ್ರೀ ಪಿ. ಶ್ರೀಕುಮಾರ್ ಮುಖ್ಯ ಭಾಷಣ ಮಾಡುವರು.
3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಆರ್‍ಎಸ್‍ಎಸ್ ದಕ್ಷಿಣ ಪ್ರಾಂತ ಪ್ರಭಾತಿಕ್ ಪ್ರಮುಖ್ ಪಿ. ಉಣ್ಣಿಕೃಷ್ಣನ್ ಅಧ್ಯಕ್ಷತೆ ವಹಿಸುವರು. ಸಂಜೆ 4ಕ್ಕೆ ನಗರಸಭಾಂಗಣ ವಠಾರದಿಂದ ಆರಂಭಗೊಳ್ಳುವ ಭವ್ಯಮೆರವಣಿಗೆ ನಗರದಲ್ಲಿ ಸಂಚರಿಸಿ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆಯೊಂದಿಗೆ ಸಮಾರೋಪಗೊಳ್ಳಲಿದೆ.




