ಮಂಜೇಶ್ವರ: ವರ್ಕಾಡಿ ಕೊಡ್ಲಮೊಗರು ಶ್ರೀ ಮಲಯರಾಯ ದೈವದ ವಾರ್ಷಿಕ ವಾರ್ಷಿಕ ನೇಮೋತ್ಸವ ಜ. 24ರಂದು ಪಜ್ವದ ನೇಮದ ಗದ್ದೆಯಲ್ಲಿ ಜರುಗಲಿದೆ. ದೇವಿಪ್ರಸಾದ ಪೊಯ್ಯೆತ್ತಾಯ ಹಾಗೂ ತಂತ್ರಿವರ್ಯ ವರ್ಕಾಡಿ ಹೊಸಮನೆ ರಾಜೇಶ ತಾಳಿತ್ತಾಯ ಅವರ ನೇತೃತ್ವದಲ್ಲಿಕಾರ್ಯಕ್ರಮ ಜರುಗಲಿದೆ.
ಗುರುವಾರ ಆನೆಮಾರು ಶ್ರೀಮಲರಾಯ ಪರಿವಾರ ದೈವಸ್ಥಾನದಿಂದ ಭಂಡಾರದ ಆಗಮನವಾಯಿತು. 24ರಂದು ಬೆಳಗ್ಗೆ10.30ಕ್ಕೆ ಶ್ರೀ ಮಲಯರಾಯ ಮತ್ತು ಪರಿವಾರ ದೈವಗಳ ನೇಮನೋತ್ಸವ ನಡೆಯುವುದು.

