ಕಾಸರಗೋಡು: ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಕೃಷಿ ಇಲಾಖೆ ಜಾರಿಗೆ ತಂದಿರುವ ಕೇರ ಯೋಜನೆಯ ಅಂಗವಾಗಿ ಕೃಷಿಕರ ಉತ್ಪಾದಕ ಮೈತ್ರಿಕೂಟಗಳಲ್ಲಿ (ಪ್ರೊಡಕ್ಟಿವ್ ಅಲಯೆನ್ಸ್) ಆಸಕ್ತಿ ಹೊಂದಿರುವ ರೈತ ಉತ್ಪಾದಕ ಕಂಪನಿಗಳು, ವಾಣಿಜ್ಯ ಕಂಪನಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 31 ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕೃಷಿಕರ ವಾಣಿಜ್ಯ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಸುಸ್ಥಿರ ವಾಣಿಜ್ಯ ಮೈತ್ರಿಕೂಟ ರಚಿಸಲು ಸಹಾಯವಾಗುವ ರೀತಿಯಲ್ಲಿ ರೈತ ಉತ್ಪಾದಕ ಕಂಪನಿ ಮತ್ತು ವಾಣಿಜ್ಯ ಕಂಪನಿ ಆರಂಭಿಸಲಾಗಿದೆ. ಉತ್ಪಾದಕ ಮೈತ್ರಿಕೂಟಗಳು ರೈತ ಉತ್ಪಾದಕ ಕಂಪನಿಗಳ(ಎಫ್‍ಪಿಸಿ) ಮೂಲಕ ಸಣ್ಣ ಹಿಡುವಳಿದಾರರು ಮತ್ತು ಕೃಷಿಕರ ಕೃಷಿ ಉತ್ಪನ್ನಗಳನ್ನು ಖರೀದಿಸಲು ಸಿದ್ಧರಿರುವ ಸೂಕ್ತ ವ್ಯಾಪಾರ ಪಾಲುದಾರರನ್ನು ಒಟ್ಟುಗೂಡಿಸಲು ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಕೃಷಿ ಮತ್ತು ಕೃಷಿಯೇತರ ಕಂಪನಿಗಳು, ಸೂಪರ್ ಮಾರ್ಕೆಟ್ ನೆಟ್‍ವರ್ಕ್, ರಫ್ತುದಾರರು, 10 ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಇ-ಕಾಮರ್ಸ್ ಪ್ಲಾಟ್‍ಫಾರ್ಮ್‍ಗಳಿಗೆ ಈ ಯೋಜನೆಯಲ್ಲಿ ಕೃಷಿ ವ್ಯವಹಾರ ಪಾಲುದಾರರಾಗಿ (ಎಬಿಪಿ) ಭಾಗವಹಿಸಲು ಆಹ್ವಾನಿಸಲಾಗಿದೆ.
ಕಾಸರಗೋಡು, ಕಣ್ಣೂರು, ವಯನಾಡು, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ 200 ಜನ ಉದ್ಯೋಗಿಗಳೊಂದಿಗೆ ಮತ್ತು ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವದೊಂದಿಗೆ 10 ಲಕ್ಷ ರೂ. ವಹಿವಾಟು ಹೊಂದಿರುವ ಪ್ಲಾಟ್‍ಫಾರ್ಮ್‍ಗಳು ಮತ್ತು ರೈತ ಉತ್ಪಾದಕ ಕಂಪನಿಗಳು ಈ ಅವಕಾಶದ ಲಾಭವನ್ನು ಪಡೆದುಕೊಂಡು https://pa.kera.kerala.gov.in ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಕೇರ ಸಂಸ್ಥೆಯ ಕಣ್ಣೂರು(9037824054)ಅಥವಾ ತ್ರಿಶ್ಯೂರ್(9037824056)ಪ್ರಾದೇಶಿಕ ಕಚೇರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

