ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ರಜತ ಮಹೋತ್ಸವದ ಸಂದರ್ಭದಲ್ಲಿ ವರ್ಧಂತ್ಯುತ್ಸವ ಇಂದು (ಜನವರಿ 24) ಬೆಳಗ್ಗೆ 9.30 ರಿಂದ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿದೂರು ಬೆಜಪ್ಪೆ ಸುಬ್ರಹ್ಮಣ್ಯ ಭಟ್ ವಹಿಸುವರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಎಂ. ಶಶಿಧರ, ಮುಳ್ಳೇರಿಯಾ ಮಂಡಲ ಗುರಿಕ್ಕಾರ ಸತ್ಯನಾರಾಯಣ ಮೊಗ್ರ, ನೀರ್ಚಾಲು ಮಹಾಜನ ವಿದ್ಯಾ ಸಂಸ್ಥೆಯ ಸಂಚಾಲಕ ಜಯದೇವ ಖಂಡಿಗೆ, ಶಾಲಾ ಪಿಟಿಎ ಅಧ್ಯಕ್ಷ ಉದಯ ಕುಮಾರ್ ಮಾಯಿಪ್ಪಾಡಿ ಮೊದಲಾದವರು ಭಾಗವಹಿಸುವರು. ಬೆಳಗ್ಗೆ 10.30 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿವೆ.

