ಕುಂಬಳೆ: ದೇಲಂಪಾಡಿ ಗ್ರಾಮ ಪಂಚಾಯತಿ ಅಡೂರು ಗ್ರಾಮದ ಕೊರತಿಮೂಲೆ ಕೃಷ್ಣನಿವಾಸದ ಅಡೂರು ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥವಾಗಿ ನೀಡುವ 2024-25ರ ಸಾಲಿನ ವಿದ್ಯಾರ್ಥಿ ವೇತನ ಸಹಿತ ಬಹುಮುಖಿ ಪ್ರತಿಭಾ ಪುರಸ್ಕಾರಕ್ಕೆ ಕೆ. ಶಾಶ್ವತ್ ಆಯ್ಕೆಯಾಗಿದ್ದಾರೆ. ಇವರು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 9ನೇ ತರಗತಿಯ ವಿದ್ಯಾರ್ಥಿ. ಇವರು ಡಾ. ಕೆ. ಸುರೇಶ್ ಕುಮಾರ್-ರೂಪಶ್ರೀ ಕೆ. ದಂಪತಿಯ ಪುತ್ರ. ಇವರು ಗಣಿತ, ವಿಜ್ಞಾನ, ಚದುರಂಗ ಮತ್ತು ಕರಾಟೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಚದುರಂಗ ಸ್ಪರ್ಧೆ, ಗಣಿತ ಹಾಗೂ ವಿಜ್ಞಾನ ಮೇಳಗಳಲ್ಲಿ ಉಪಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದರು. ಸಾಹಿತ್ಯ ಕ್ಷೇತ್ರದಲ್ಲೂ ಕ್ರಿಯಾಶೀಲರಾಗಿದ್ದಾರೆ. ಕರಾಟೆ ವಿಭಾಗದಲ್ಲಿ ಬ್ಲೂ ಬೆಲ್ಟ್ ಪಡೆದಿದ್ದು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಇಂದು ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

-K.SHASHWATH.jpg)
