ಮೊಡವೆಗಳು ನಿಮ್ಮ ಸೌಂದರ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಮೊಡವೆಗಳು ಅನೇಕ ಜನರ ಆತ್ಮವಿಶ್ವಾಸವನ್ನ ಸಹ ಛಿದ್ರಗೊಳಿಸಬಹುದು. ಇಂದು ನಾವು ನಿಮಗೆ ಎರಡು ಜೀವಸತ್ವಗಳು ಅಂದರೆ ವಿಟಮಿನ್‌ಗಳ ಬಗ್ಗೆ ಹೇಳುತ್ತೇವೆ. ಇವುಗಳ ಕೊರತೆಯಿಂದಲೇ ನಿಮ್ಮ ಮುಖದಲ್ಲಿ ಮೊಡವೆಗಳು ಉಂಟಾಗುತ್ತವೆ.
ವಿಟಮಿನ್ 'ಎ' ಕೊರತೆಯು ಮೊಡವೆಗಳಿಗೆ ಕಾರಣವಾಗಬಹುದು. ವಿಟಮಿನ್ ಎ ಚರ್ಮದ ಕೋಶಗಳ ಬೆಳವಣಿಗೆಯನ್ನ ಉತ್ತೇಜಿಸಲು ಮತ್ತು ಎಣ್ಣೆ ಉತ್ಪಾದನೆಯನ್ನ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ವಿಟಮಿನ್ ಎ ಕೊರತೆಯು ಚರ್ಮದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ವಿಟಮಿನ್ ಎ ಕೊರತೆಯನ್ನ ನೀಗಿಸಲು, ನೀವು ಡೈರಿ ಉತ್ಪನ್ನಗಳು, ಮೊಟ್ಟೆಯ ಹಳದಿ ಭಾಗ ಮತ್ತು ಮೀನಿನ ಎಣ್ಣೆಯನ್ನ ಸೇವಿಸಬಹುದು. ಕ್ಯಾರೆಟ್, ಸಿಹಿ ಗೆಣಸು, ಪಾಲಕ್, ಕುಂಬಳಕಾಯಿ, ಮಾವಿನಹಣ್ಣು, ಪಪ್ಪಾಯಿ ಮತ್ತು ಏಪ್ರಿಕಾಟ್‌ಗಳು ಸಹ ಗಮನಾರ್ಹ ಪ್ರಮಾಣದ ವಿಟಮಿನ್ ಎ ಯನ್ನ ಹೊಂದಿರುತ್ತವೆ.
ವಿಟಮಿನ್ ಡಿ ಕೊರತೆಯಿಂದಲೂ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಬಹುದು. ವಿಟಮಿನ್ ಡಿ ಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಚರ್ಮದ ಉರಿಯೂತವನ್ನ ಕಡಿಮೆ ಮಾಡುವುದಲ್ಲದೆ, ಮೊಡವೆಗಳನ್ನ ತಡೆಯಲು ಸಹಾಯ ಮಾಡುತ್ತದೆ.
ವಿಟಮಿನ್ ಡಿ ಕೊರತೆಯನ್ನ ನೀಗಿಸಲು ನೀವು ಹಾಲು, ಕಿತ್ತಳೆ ರಸ,ಧಾನ್ಯಗಳು, ಬಾದಾಮಿ ಅಥವಾ ಸೋಯಾ ಹಾಲು ಸೇವಿಸಬಹುದು, ಏಕೆಂದರೆ ಇವುಗಳಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಡಿ ಇರುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಸಮರಸ ಸುದ್ದಿ ಇದನ್ನು ದೃಢಪಡಿಸುವುದಿಲ್ಲ)

