HEALTH TIPS

ಮಧುಮೇಹ ಭಾರತೀಯರ ಆರೋಗ್ಯ ಮಾತ್ರವಲ್ಲ, ಅರ್ಥವ್ಯವಸ್ಥೆಯನ್ನೂ ಬರಿದಾಗಿಸುತ್ತಿದೆ!

ಭಾರತ ವಿಶ್ವದ ಎರಡನೇ ಅತಿ ಹೆಚ್ಚು ಮಧುಮೇಹದ ಆರ್ಥಿಕ ಹೊರೆಯನ್ನು ಎದುರಿಸುತ್ತಿದೆ.

ಜಗತ್ತಿನಲ್ಲೇ ಅತಿದೊಡ್ಡ ಮಧುಮೇಹದ ಭಾರವನ್ನು ಈಗಾಗಲೇ ಭಾರತ ಹೊರುತ್ತಿದೆ. ಅದೀಗ ಅತಿದೊಡ್ಡ ಆರ್ಥಿಕ ಭಾರವಾಗಿ ಪರಿಣಮಿಸಲಿದೆ. ಜಾಗತಿಕವಾಗಿ ಎರಡನೇ ಅತ್ಯಧಿಕ ಮದುಮೇಹಿಗಳಿರುವ ದೇಶವಾಗಿರುವ ಭಾರತ ಮಧುಮೇಹದಿಂದ 11.4 ಲಕ್ಷ ಕೋಟಿ ಡಾಲರ್ ಆರ್ಥಿಕ ಹೊರೆಯನ್ನು ಹೊರುತ್ತಿದೆ.

ಮಧುಮೇಹ ಇದೀಗ ಭಾರತದಲ್ಲಿ ವೈಯಕ್ತಿಕ ಆರೋಗ್ಯದ ಸಮಸ್ಯೆಯಾಗಿ ಉಳಿದಿಲ್ಲ. ದೇಶದ ಅತಿದೊಡ್ಡ ಆರ್ಥಿಕ ಹೊರೆಯಾಗಲಿದ್ದು, ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳನ್ನು ಮೀರಿ ದೀರ್ಘಕಾಲೀನ ಪರಿಣಾಮಗಳಾಗಿ ವರ್ಧಿಸಲಿದೆ.

ಹೊಸ ಅಂತಾರಾಷ್ಟ್ರೀಯ ಅಧ್ಯಯನವೊಂದು ಅಂದಾಜಿಸಿರುವ ಪ್ರಕಾರ ಜಾಗತಿಕವಾಗಿ ಮಧುಮೇಹದ ಕಾರಣದಿಂದಾಗಿ ಭಾರತ 11.4 ಲಕ್ಷ ಕೋಟಿ ಡಾಲರ್ ನಷ್ಟು ಎಂದರೆ, ಎರಡನೇ ಅತಿ ದೊಡ್ಡ ಆರ್ಥಿಕ ಹೊರೆಯನ್ನು ಎದುರಿಸುತ್ತಿದೆ. ಅಮೆರಿಕ ಮಾತ್ರ ಭಾರತವನ್ನು ಮೀರಿಸಿದ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಮಧುಮೇಹದ ವೆಚ್ಚ 16.5 ಲಕ್ಷ ಕೋಟಿ ಡಾಲರ್ಗಳಷ್ಟಿದ್ದರೆ, ಮೂರನೇ ಸ್ಥಾನದಲ್ಲಿರುವ ಚೀನಾದಲ್ಲಿ 11 ಲಕ್ಷ ಕೋಟಿ ಡಾಲರ್ ನಷ್ಟಿದೆ.

ಭಾರತ ಈಗಾಗಲೇ ಜಾಗತಿಕವಾಗಿ ಅತಿ ದೊಡ್ಡ ಮಧುಮೇಹದ ಹೊರೆಯನ್ನು ಹೊತ್ತಿರುವಾಗ ಈ ಅಧ್ಯಯನ ವರದಿಗಳು ಬಂದಿವೆ. ಎನ್ಸಿಡಿ ರಿಸ್ಕ್ ಫ್ಯಾಕ್ಟರ್ ಕೊಲಾಬರೇಶನ್ (NCD-RisC) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಟಿಸಿದ ಇತ್ತೀಚೆಗಿನ ವರದಿಯ ಪ್ರಕಾರ 2022ರಲ್ಲಿ ಭಾರತ ಅತ್ಯಧಿಕ ಪ್ರಮಾಣದಲ್ಲಿ ಮಧುಮೇಹಿಗಳನ್ನು ದಾಖಲಿಸಿದೆ. ವಿಶ್ವದ ಒಟ್ಟು ಮಧುಮೇಹಿಗಳ ಕಾಲು ಭಾಗಕ್ಕಿಂತ ಹೆಚ್ಚು ಅಂದರೆ 828 ದಶಲಕ್ಷ ಪ್ರಕರಣಗಳನ್ನು ದಾಖಲಿಸಿದೆ. ಮುಖ್ಯವಾಗಿ ಭಾರತದಲ್ಲಿ ಶೇ 62ರಷ್ಟು ಮಧುಮೇಹಿಗಳು ಯಾವುದೇ ಚಿಕಿತ್ಸೆಯನ್ನು ಸ್ವೀಕರಿಸುತ್ತಿಲ್ಲದೆ ಇರುವುದು ಎಚ್ಚರಿಕೆಯ ಗಂಟೆಯಾಗಿದೆ.

► ಆಸ್ಪತ್ರೆಗಳನ್ನು ಮೀರಿದ ವೆಚ್ಚ

ʼನೇಚರ್ ಮೆಡಿಸಿನ್ʼ ನಲ್ಲಿ ಪ್ರಕಟವಾದ ಹೊಸ ಅಧ್ಯಯನವು 2020ರಿಂದ 2050ರ ನಡುವೆ 204 ದೇಶಗಳಲ್ಲಿ ಮಧುಮೇಹದಿಂದ ಆಗಿರುವ ಆರ್ಥಿಕ ಪರಿಣಾಮವನ್ನು ಅಧ್ಯಯನ ಮಾಡಿದೆ. ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟಮ್ಸ್ ಅನಾಲಿಸಿಸ್ ಮತ್ತು ವಿಯೆನ್ನಾ ಯುನಿವರ್ಸಿಟಿ ಆಫ್ ಇಕನಾಮಿಕ್ಸ್ ಆಂಡ್ ಬ್ಯುಸಿನೆಸ್ ಸೇರಿದಂತೆ ಸಂಸ್ಥೆಗಳ ಸಂಶೋಧಕರು ವೈದ್ಯಕೀಯ ವೆಚ್ಚಗಳನ್ನು ಮಾತ್ರವಲ್ಲದೆ, ಉತ್ಪಾದಕತೆ ನಷ್ಟ ಮತ್ತು ಆರೈಕೆ ನೀಡಬೇಕಾದ ಅಗತ್ಯವನ್ನೂ ಪರಿಶೀಲಿಸಿದ್ದಾರೆ.

ಜಾಗತಿಕವಾಗಿ ಮಧುಮೇಹ ವೆಚ್ಚ ಸುಮಾರು 10 ಲಕ್ಷ ಕೋಟಿ ಡಾಲರ್ ಗಳಷ್ಟಾಗುತ್ತದೆ. ಹಣ ಪಾವತಿಸದೆ ಆರೈಕೆ ಮಾಡುವ ಕುಟುಂಬದವರನ್ನು ಹೊರತುಪಡಿಸಿ ನೋಡಿದರೆ, ವಿಶ್ವದ ಒಟ್ಟು ವಾರ್ಷಿಕ ಜಿಡಿಪಿಯ ಶೇ 0.2ರಷ್ಟು ಆಗುತ್ತದೆ. ಕುಟುಂಬದವರ ಆರೈಕೆಯೂ ಸೇರಿಸಿದರೆ ವಿಷಯ ಇನ್ನಷ್ಟು ಹದಗೆಡುತ್ತದೆ. ಒಟ್ಟು ಜಾಗತಿಕ ವೆಚ್ಚವು 152 ಲಕ್ಷ ಕೋಟಿಗೆ ಏರುತ್ತದೆ. ಅಂದರೆ ಜಾಗತಿಕ ಜಿಡಿಪಿಯ ಶೇ 1.7ರಷ್ಟಾಗುತ್ತದೆ.

"ಆರೈಕೆ ಮಾಡುವವರು ಬಹುತೇಕ ಸಂದರ್ಭದಲ್ಲಿ ಕಾರ್ಮಿಕ ಮಾರುಕಟ್ಟೆಯಿಂದ ಹೊರಗಿರುತ್ತಾರೆ. ಹೀಗಾಗಿ ಹೆಚ್ಚುವರಿ ಆರ್ಥಿಕ ವೆಚ್ಚ ಬೀಳುತ್ತದೆ" ಎನ್ನುತ್ತಾರೆ ವಿಯೆನ್ನಾ ವಿಶ್ವವಿದ್ಯಾಲಯದ ಪ್ರೊಫೆಸರ್ ಕ್ಲೌಸ್ ಪ್ರೆಟ್ನರ್. ಹಾಗೆ ನೋಡಿದರೆ, ಮಧುಮೇಹಕ್ಕೆ ಸಂಬಂಧಿಸಿದ ಆರ್ಥಿಕ ಹೊರೆಯ ಶೇ 90ರಷ್ಟು ಇಂತಹ ಅಸಂಘಟಿತ ಕ್ಷೇತ್ರದ ಆರೈಕೆಯಿಂದ ಬೀಳುತ್ತದೆ.

► ಭಾರತದ ಹೊರೆ ಅತ್ಯಧಿಕವೇಕೆ?

ಆರ್ಥಿಕ ಪದಗಳಲ್ಲಿ ಹೇಳುವುದಾದರೆ ಅಮೆರಿಕ ಅತಿ ಹೆಚ್ಚು ಮಧುಮೇಹದ ವೆಚ್ಚ 16.5 ಲಕ್ಷ ಕೋಟಿ ಡಾಲರ್ ಗಳಷ್ಟು ಹೊರುತ್ತಿದೆ. ಭಾರತ 11.4 ಲಕ್ಷ ಕೋಟಿ ಡಾಲರ್ ನಷ್ಟು ವೆಚ್ಚ ಮಾಡುತ್ತಿದ್ದು, ಎರಡನೇ ಅತಿ ದೊಡ್ಡ ಆರ್ಥಿಕ ಹೊರೆಯನ್ನು ಎದುರಿಸುತ್ತಿದೆ. ಮೂರನೇ ಸ್ಥಾನದಲ್ಲಿರುವ ಚೀನಾದಲ್ಲಿ ಆರ್ಥಿಕ ಹೊರೆ 11 ಲಕ್ಷ ಕೋಟಿ ಡಾಲರ್ ನಷ್ಟಿದೆ.

ಭಾರತ ಮತ್ತು ಚೀನಾದ ಮಟ್ಟಿಗೆ ಅತಿ ಹೆಚ್ಚಿನ ವೆಚ್ಚಕ್ಕೆ ಮುಖ್ಯ ಕಾರಣ ಮಧುಮೇಹಿಗಳ ಸಂಖ್ಯೆ ಹೆಚ್ಚಿರುವುದು. ಆದರೆ ಅಮೆರಿಕದಲ್ಲಿ ಅದಕ್ಕೆ ವಿರುದ್ಧವಾಗಿ ಚಿಕಿತ್ಸೆಯ ವೆಚ್ಚ ಅತ್ಯಧಿಕವಿರುವುದು ಮತ್ತು ವಿತ್ತೀಯ ಬಂಡವಾಳದ (physical capital) ನಷ್ಟದಿಂದಾಗಿರುವ ಹೊರೆಯಾಗಿದೆ.

ಅಧ್ಯಯನವು ಶ್ರೀಮಂತ ಮತ್ತು ಬಡ ದೇಶಗಳ ನಡುವಿನ ತೀಕ್ಷ್ಣ ವ್ಯತ್ಯಾಸವನ್ನೂ ಮುಖ್ಯವಾಗಿ ತೋರಿಸಿದೆ. ಅತ್ಯಧಿಕ-ಆದಾಯದ ರಾಷ್ಟ್ರಗಳಲ್ಲಿ, ಚಿಕಿತ್ಸೆಯ ವೆಚ್ಚಗಳು ಮಧುಮೇಹದ ಆರ್ಥಿಕ ಹೊರೆಯ ಶೇ 41ರಷ್ಟಾಗುತ್ತದೆ. ಕಡಿಮೆ ಆದಾಯದ ದೇಶಗಳಲ್ಲಿ ಈ ಅಂಕಿ ಅಂಶವು ಶೇ 14ರಷ್ಟು ಕುಸಿಯುತ್ತದೆ. ಅದಕ್ಕೆ ವೈದ್ಯಕೀಯ ಆರೈಕೆಯ ಕೊರತೆಯೂ ಕಾರಣವಾಗಿದೆ.

ಮಧುಮೇಹದಂತಹ ದೀರ್ಘಕಾಲೀನ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳು ಹೆಚ್ಚಿನ ಆದಾಯದ ದೇಶಗಳಲ್ಲಿ ಮಾತ್ರ ಲಭ್ಯವಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ" ಎನ್ನುತ್ತಾರೆ ಅಧ್ಯಯನದ ಸಹಲೇಖಕ ಮೈಖಲ್ ಕುಹ್ನ್.

► ಕ್ಯಾನ್ಸರ್ ಮತ್ತು ಅಲ್ಜೀಮರ್ಗಳಿಗಿಂತ ದೊಡ್ಡದು

ಸಂಶೋಧಕರು ಗಮನಿಸಿರುವ ಪ್ರಕಾರ ಮಧುಮೇಹದ ಆರ್ಥಿಕ ಪರಿಣಾಮವು ಕ್ಯಾನ್ಸರ್ ಅಥವಾ ಅಲ್ಜೀಮರ್ ರೋಗಕ್ಕಿಂತಲೂ ದೊಡ್ಡದು. ವಿಶ್ವಾದ್ಯಂತ ಮಧುಮೇಹ ದೀರ್ಘಕಾಲೀನ ದುಬಾರಿ ಕಾಯಿಲೆಗಳಲ್ಲಿ ಒಂದಾಗಿದೆ. ಹೀಗಾಗಿ ತಡೆಗಟ್ಟುವಿಕೆ ಅತ್ಯಂತ ಪರಿಣಾಮಕಾರಿ ಪರಿಹಾರವಾಗಿರುತ್ತದೆ. ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಕ್ರಮ ಮತ್ತು ತೂಕ ನಿರ್ವಹಣೆಯಿಂದ ಮಧುಮೇಹದ ಆರೋಗ್ಯ ಮತ್ತು ಆರ್ಥಿಕ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಅತಿ ನಿರ್ಣಾಯಕವಾಗಿರುತ್ತದೆ. ಒಟ್ಟು ಜನಸಂಖ್ಯೆಯ ಮಧುಮೇಹ ತಪಾಸಣೆ, ತ್ವರಿತ ರೋಗ ನಿರ್ಣಯ ಮತ್ತು ಸಕಾಲಿಕ ಚಿಕಿತ್ಸೆಯಿಂದ ದೀರ್ಘಕಾಲೀನ ವೆಚ್ಚಗಳು ಹೆಚ್ಚಾಗುವ ಸಮಸ್ಯೆಯನ್ನು ತಡೆಗಟ್ಟಬಹುದು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries