ಬದಿಯಡ್ಕ: ಎರ್ನಾಕುಳಂ ಆಲುವ ತಂತ್ರವಿದ್ಯಾಪೀಠದ ಪೂರ್ವವಿದ್ಯಾರ್ಥಿ ಸಮಿತಿ ಕುಟುಂಬ ಸಂಗಮ ಶನಿವಾರ ಜರಗಿತು. ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು. ಪೂರ್ವ ವಿದ್ಯಾರ್ಥಿ ಹಿರಿಯರಾದ ಬ್ರಹ್ಮಶ್ರೀ ಅಂಡಲಾಡಿ ದಿವಾಕರನ್ ನಂಬೂದಿರಿ ದೀಪ ಬೆಳಗಿಸಿದರು.
ತಂತ್ರವಿದ್ಯಾಪೀಠದ ರಕ್ಷಾಧಿಕಾರಿ ಪಿ.ಎನ್.ಗೋಪಿ ಅಧ್ಯಕ್ಷತೆ ವಹಿಸಿದ್ದರು. ಕವಯಿತ್ರಿ ಹಾಗೂ ನಿವೃತ್ತ ಶಿಕ್ಷಕಿ ಕೆ.ಪಿ. ಶೈಲಜ, ತಂತ್ರವಿದ್ಯಾಪೀಠದ ನಿರ್ದೇಶಕ ಗೋಪಾಲಕೃಷ್ಣನ್ ಕುಂಞÂ ಮಾತನಡಿದರು. ಪ್ರಾಂಶುಪಾಲರಾದ ಪಿ. ಬಾಲಕೃಷ್ಣ ಭಟ್ ಸ್ವಾಗತಿಸಿ, ಪೂರ್ವವಿದ್ಯಾರ್ಥಿ ಸಮಿತಿಯ ಕಾರ್ಯದರ್ಶಿ ಇಡಕ್ಕಾಡು ವಾಸುದೇವನ್ ನಂಬೂದಿರಿ ವಂದಿಸಿದರು.

.jpg)
