ಕಾಸರಗೋಡು: ವಿದುಷಿ ಉಷಾ ಈಶ್ವರ ಭಟ್ ಅವರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 29ನೇ ವಾರ್ಷಿಕೋತ್ಸವ ಭಾನುವಾರ ಕಾಸರಗೋಡು ಲಲಿತಕಲಾಸದನದಲ್ಲಿ ಜರಗಿತು. ವಿದ್ವಾನ್ ಸದಾಶಿವ ಆಚಾರ್ಯ ಕಲ್ಮಾಡಿ ದೀಪಬೆಳಗಿಸಿ ಉದ್ಘಾಟಿಸಿದರು. ವಿದುಷಿ ಉಷಾ ಈಶ್ವರ ಭಟ್, ವಿದ್ವಾನ್ ಪ್ರಭಾಕರ ಕುಂಜಾರು, ವಿದ್ವಾನ್ ಬಾಲರಾಜ್ ಬೆದ್ರಡಿ, ಡಾ. ಮಾಯಾ ಮಲ್ಯ, ವಿದ್ವಾನ್ ಕೋವೈ ಕಣ್ಣನ್ ಕಾಞಂಗಾಡು, ವಿದ್ವಾನ್ ರಾಜೀವ್ ಗೋಪಾಲ್ ವೆಳ್ಳಿಕೋತ್, ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ವಿದ್ವಾನ್ ಟಿ.ಕೆ.ವಾಸುದೇವ ಕಾಞಂಗಾಡು, ವಿದುಷಿ ಜಯಲಕ್ಷ್ಮೀ ಭಟ್, ಯಕ್ಷಗಾನ ಕಲಾವಿದ ವೇಣುಗೋಪಾಲ ಶೇಣಿ, ನಿವೃತ್ತ ಅಧ್ಯಾಪಕ ಶಿವರಾಮ ಭಟ್ ಚಿತ್ತಾರಿ, ಪ್ರಕಾಶ ಆಚಾರ್ಯ ಕುಂಟಾರು, ಉದಯಕುಮಾರ್ ಉಪಸ್ಥಿತರಿದ್ದರು. ಸಂಚಾಲಕ ಈಶ್ವರ ಭಟ್ ಸ್ವಾಗತಿಸಿದರು. ಶಿವರಂಜಿನಿ ಪ್ರಾರ್ಥನೆ ಹಾಡಿದರು. ಡಾ. ಶಾರ್ವರಿ ಭಟ್ ಕಾರ್ಯಕ್ರಮ ನಿರೂಪಿಸಿದರು.


