ಕಾಸರಗೋಡು: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆಸಲಾದ ಚಟುವಟಿಕೆಗಳನ್ನು ಪರಿಶೀಲಿಸಲು ಮತದಾರರ ನೋಂದಾವಣಾ ನಿರೀಕ್ಷಕ, ಕೇಂದ್ರ ಕಂದಾಯ ಕಾರ್ಯದರ್ಶಿಯೂ ಆಗಿರುವ ಎಂ.ಜಿ. ರಾಜಮಾಣಿಕ್ಯಂ, ಐಎಎಸ್, ಕಾಸರಗೋಡು ಜಿಲ್ಲೆಗೆ ಭೇಟಿ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ನಡೆಸಲಾದ ಚಟುವಟಿಕೆ ಪರಿಶೀಲಿಸುವ ನಿಟ್ಟಿನಲ್ಲಿ ಭೇಟಿ ಆಯೋಜಿಸಲಾಗಿದ್ದು, ಜಿಲ್ಲೆಯ ಎಸ್‍ಐಆರ್ ಚಟುವಟಿಕೆಗಳ ಬಗ್ಗೆ ವೀಕ್ಷಕ ರಾಜಮಾಣಿಕ್ಕಂ ಅವರು ತೃಪ್ತಿ ವ್ಯಕ್ತಪಡಿಸಿದರು. ಕೆಲವೊಂದು ಬೂತ್‍ಗಳಮತದಾರರ ಹೆಸರು ವಿವಿಧ ಬೂತ್‍ಗಳಲ್ಲಿ ಚದುರಿಹೋಗಿರುವ ಪರಿಸ್ಥಿತಿಯನ್ನು ಸರಿಪಡಿಸಲು ಆಯೋಗವು ಸೂಚಿಸಿದ ಅರ್ಜಿ ನಮೂನೆಗಳನ್ನು ಮತದಾರರು ಸಲ್ಲಿಸಬೇಕು ಎಂದು ಅವರು ಮಾಹಿತಿ ನೀಡಿದರು. ಶಾಸಕರಾದ ಎನ್ ಎ ನೆಲ್ಲಿಕುನ್ನು ಮತ್ತು ಸಿ ಎಚ್ ಕುಂಞಂಬು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕೆ ಇನ್ಬಾಶೇಖರ್, ಜಿಲ್ಲಾ ಚುನಾವಣಾ ವಿಭಾಗದ ಅಪರ ಜಿಲ್ಲಾಧಿಕಾರಿ ಎ.ಎನ್.ಗೋಪಕುಮಾರ್, ಚುನಾವಣಾ ನೋಂದಣಿ ಅಧಿಕಾರಿಗಳಾದ ವಿ.ಎಂ.ರಘುಮಣಿ, ಬಿನು ಜೋಸೆಫ್, ಎಂ.ರಮೀಸ್ ರಾಜಾ, ಕೆ.ಬಾಲಗೋಪಾಲನ್, ಕೆ.ಅಜೇಶ್, ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಪಿ.ಸಜಿತ್‍ಎ ಸುರೇಶ್ ಕುಮಾರ್, ಜಿ ಸುರೇಶ್ ಬಾಬು, ಪಿ ವಿ ಮುರಳಿ, ಚುನಾವಣಾ ಇಲಾಖೆಯ ಕಿರಿಯ ಸೂಪರಿಂಟೆಂಡೆಂಟ್ ಎ ರಾಜೀವನ್ ಮತ್ತು ಇತರ ಚುನಾವಣಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

.jpg)
