ಕಾಸರಗೋಡು: ವೈಜ್ಞಾನಿಕ ಜೀವನಶೈಲಿಯ ಜತೆಗೆ ದೇಶೀಯ ಜೀವನ ಪದ್ಧತಿಯನ್ನು ಅನುಸರಿಸಿಕೊಂಡು ಹೋಗಬೇಕಾದುದು ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿದೆ ಎಂದು ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ತಿಳಿಸಿದ್ದಾರೆ.
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಸ್ಥಳೀಯ ವೈಜ್ಞಾನಿಕ ಚಳುವಳಿ-ಕೇರಳ ರಾಜ್ಯ ಸರ್ಕಾರ ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣದ ರಾಷ್ಟ್ರೀಯ ವಿಚಾರ ಸಂಕಿರಣವು ಜಂಟಿಯಾಗಿ ಆಯೋಜಿಸಿದ್ದ 32 ನೇ ಸ್ವದೇಶಿ ವಿಜ್ಞಾನ ಕಾಂಗ್ರೆಸನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ, ಜೀವನದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ಪೂರ್ವಜರು ಆರೋಗ್ಯದ ಜೀವನಶೈಲಿಯನ್ನು ಈ ಮೂಲಕಕಂಡುಕೊಮಡಿದ್ದರು. ಇಂದು ವೈಜ್ಞಾನಿಕ ಜೀವನ ವಿಧಾನವನ್ನು ನಿರ್ಲಕ್ಷಿಸುವುದರಿಂದ ಪ್ರಸಕ್ತ ಹಲವು ಸಮಸ್ಯೆಗಳಿಗೆ ಕಾರಣವಾಗಿರುವುದಾಗಿ ತಿಳಿಸಿದರು.
ವಿಶ್ವವಿದ್ಯಾಲಯದ ಪೆರಿಯಾ ಕ್ಯಾಂಪಸ್‍ನಲ್ಲಿ ನಡೆದ ಸಮಾರಂಭದಲ್ಲಿ ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಮತ್ತು ಸಂಶೋಧನೆಯು ತರಗತಿ ಕೊಠಡಿಗಳು ಮತ್ತು ಪ್ರಯೋಗಾಲಯಗಳಿಗೆ ಸೀಮಿತವಾಗದೆ, ದೇಶದ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಬೇಕು.ದೇಶದ ಅಭಿವೃದ್ಧಿಯಲ್ಲಿ ಪ್ರೇರಕ ಶಕ್ತಿಯಾಗುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಮುಖ್ಯ ಧ್ಯೇಯ ಎಂದು ತಿಳಿಸಿದರು.
ಈ ಸಂದರ್ಭ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಸಮಗ್ರ ಕೊಡುಗೆಗಾಗಿ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರದ ಮಾಜಿ ನಿರ್ದೇಶಕ ಡಾ. ಚಂದ್ರಭಾಸ್ ನಾರಾಯಣ ಮತ್ತು ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರದ ನಿರ್ದೇಶಕ ಡಾ. ಟಿ.ಎಂ. ಅವರನ್ನು ಸನ್ಮಾನಿಸಲಾಯಿತು. ಬಾಲಕೃಷ್ಣನ್ ನಾಯರ್ ಮತ್ತು ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಡಾ. ವಿ.ಪಿ.ಎನ್ ಅವರಿಗೆ ರಾಜ್ಯಪಾಲರು ಸ್ವದೇಶಿ ಪ್ರಶಸ್ತಿ ಪ್ರದಾನ ಮಾಡಿದರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಕರಿಗೆ ಸಂಶೋಧನಾ ಯೋಜನಾ ಪ್ರಶಸ್ತಿ ವಿತರಿಸಲಾಯಿತು. ವಿಜ್ಞಾನ ಭಾರತಿ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಪೈ ಮುಖ್ಯ ಭಾಷಣ ಮಾಡಿದರು.
ಕೇರಳ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಮೋಹನನ್ ಕುನ್ನುಮ್ಮಾಳ್, ಕೋಯಿಕ್ಕೋಡ್ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಪಿ.ರವೀಂದ್ರನ್,ರಾಷ್ಟ್ರೀಯ ಅಂತರ್‍ಶಿಸ್ತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಸಿ. ಅನಂತರಾಮಕೃಷ್ಣನ್, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರದ ನಿರ್ದೇಶಕ ಟಿ.ಎಂ.ಬಾಲಕೃಷ್ಣನ್ ನಾಯರ್, ಕೇರಳ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಪೆÇ್ರ. ಜಿ.ಎಂ. ನಾಯರ್ ªಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಅಂತರಶಿಸ್ತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಸಿ. ಅನಂತರಾಮಕೃಷ್ಣನ್ ಸಿ.ವಿ. ರಾಮನ್ ಸ್ಮಾರಕ ಉಪನ್ಯಾಸ ನೀಡಿದರು. ಪೆÇ್ರ.ಮೋಹನನ್ ಕುನ್ನುಮ್ಮಲ್ ಪಿ.ಪರಮೇಶ್ವರನ್ ಸಂಸ್ಮರಣಾ ಉಪನ್ಯಾಸ ಮಾಡಿದರು. ಅಮೃತಾ ಸ್ಕೂಲ್ ಆಫ್ ಆಟ್ರ್ಸ್ ಅಂಡ್ ಸೈನ್ಸ್‍ನ ಡೀನ್ ಹಾಗೂ ನಿರ್ದೇಶಕ ಪೆÇ್ರ.ಯು.ಕೃಷ್ಣಕುಮಾರ್ ಅವರು ಭಾರತೀಯ ಜ್ಞಾನ ಸರ್ವತ್ಯ ಎಂಬ ವಿಷಯದ ಕುರಿತು ಮಾತನಾಡಿದರು.
ಜ. 8ರಂದು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಜ್ಞಾನಿಗಳೊಂದಿಗೆ ಸಂವಾದವೂ ನಡೆಯಲಿದೆ. ಜನವರಿ 9 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಅಶೋಕ್ ಎಸ್. ಆಲೂರ್ ಸಮಾರೋಪ ಭಾಷಣ ಮಾಡುವರು.



