ಕಾಸರಗೋಡು: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಬೆಳ್ಳಚ್ಚಾಲ್ ಮಾದರಿ ವಸತಿ ಶಾಲೆಯಲ್ಲಿ ಜರುಗಿತು. ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎಂ. ಮೀನಾಕುಮಾರಿ ಉದ್ಘಾಟಿಸಿದರು. ಪಿಲಿಕೋಡು ಗ್ರಾ.ಪಂ ಅಧ್ಯಕ್ಷ ಕುಞÂರಾಮನ್ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಮುಖ್ಯ ಭಾಷಣ ಮಾಡಿದರು. ಗ್ರಾಮ ಪಂಚಾಯಿತಿ ಸದಸ್ಯೆ ವಿ.ಕೆ.ಸರೋಜ, ಶಾಲಾ ಮೇಲ್ವಿಚಾರಕಿ ತಿರುಮಲೇಶ್ ಪಿ.ಕೆ., ಮುಖ್ಯ ಶಿಕ್ಷಕಿ ಬಿಂದು ಪಿ, ಎಂಸಿಎಚ್ ಅಧಿಕಾರಿ ಪಿ. ಉಷಾ ಮತ್ತು ಡಿಪಿಎಚ್ ಎನ್ ಎಂ. ಶಾಂತಾ ವಂದಿಸಿದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠ ಮತ್ತು ಓಲಟ್ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಸ್ವಾಗತಿಸಿದರುಆರೋಗ್ಯ ನಿರೀಕ್ಷಕ ಪಿ.ವಿ. ಮಹೇಶ್‍ಕುಮಾರ್ ಉಪಸ್ಥಿತರಿದ್ದರು. 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ(ಅಲ್ಬೆಂಡಜೋಲ್)ಗಳನ್ನು ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 252891 ಮಕ್ಕಳಿಗೆ ಮಾತ್ರೆ ವಿತರಿಸಲಾಗಿದೆ.
ಕೊಡ್ಲಮೊಗರು ಶಾಲೆಯಲ್ಲಿ ವಿತರಣೆ:
ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವರ್ಕಾಡಿ ಪಂಚಾಯಿತಿ ಮಟ್ಟದ ಕಾರ್ಯಕ್ರಮವನ್ನು ವರ್ಕಾಡಿ ಗ್ರಾಪಂ ಸದಸ್ಯ ಗೋಪಾಲ ಕೃಷ್ಣ ಪಜ್ವ ಅವರು ವಿದ್ಯಾರ್ಥಿಗಳಿಗೆ ಮಾತ್ರೆ ನೀಡುವ ಮೂಲಕ ಉದ್ಘಾಟಿಸಿದರು. ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರದ ಶಶಿಕಲಾ ಜಂತುಹುಳ ನಿವಾರಣೆಯ ಮಹತ್ವ ಮತ್ತು ಅಲ್ಬೆಂಡಜೋಲ್ ಮಾತ್ರೆ ತೆಗೆದುಕೊಳ್ಳುವ ಕ್ರಮವನ್ನು ತಿಳಿಸಿದರು. ಶಾಲಾ ಪಿಟಿಎ ಅಧ್ಯಕ್ಷ ಹಾಗೂ ವರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಶುಂಪಾಲ ಶ್ರೀವಿಜಯ ಕುಮಾರ್, ಪಿಟಿಎ ಉಪಾಧ್ಯಕ್ಷ ಮೋಹನ, ಕಿರಿಯ ಆರೋಗ್ಯಾಧಿಕಾರಿ ಜಿತೇಶ್ ಪೀಟರ್, ಶಾಲಾ ಶೀಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲಾಮುಖ್ಯ ಶಿಕ್ಷಕಿ ಕೃಷ್ಣವೇಣಿ ಸ್ವಾಗತಿಸಿದರು. ಧನ್ಯ ವಂದಿಸಿದರು.


