ಕಾಸರಗೋಡು: ಜಿಲ್ಲೆಯ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ಪಿಟಿಎ ಅಧ್ಯಕ್ಷರಿಗಾಗಿ ವಿಶೇಷ ಸಭೆ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಜರುಗಿತು. ಶಾಲಾ ರಕ್ಷಣಾ ಗುಂಪ(ಎಸ್‍ಪಿಜಿ)ನ್ನು ಬಲಪಡಿಸುವುದು, ವಿದ್ಯಾರ್ಥಿಗಳ ರಕ್ಷಣೆ ಖಚಿತಪಡಿಸುವುದು, ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೋಶಿಯಲ್ ಪೊಲೀಸಿಂಗ್ ಕಾಸರಗೋಡು ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಸರಗೋಡು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಎಂ ದೇವದಾಸ್ ಸಮಾರಂಭ ಉದ್ಘಾಟಿಸಿ ಶಾಲಾ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳುವ ನಿಟ್ಟಿನಲ್ಲಿ ರಚಿಸಲಾಗಿರುವ ಸ್ಕೂಲ್ ಪ್ರೊಟೆಕ್ಷನ್ ಗ್ರೂಪ್(ಎಸ್‍ಪಿಜಿ) ಚಟುವಟಿಕೆ ಸಕ್ರಿಯಗೊಳಿಸುವ ಮೂಲಕ ಶಾಲಾ ಅಂತರಿಕ್ಷವನ್ನು ಮತ್ತಷ್ಟು ಸೌಹಾರ್ದಗೊಳಿಸಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳು ಮಾದಕ ದ್ರವ್ಯದ ದಾಸರಾಗದಂತೆ ಎಚ್ಚರವಹಿಸುವಲ್ಲಿ ಹೆತ್ತವರು, ಶಿಕ್ಷಕರು ಹಾಗೂ ಪಿಟಿಎಗೂ ಅದರದ್ದೇ ಆದ ಪಾತ್ರವಿದೆ ಎಂದುತಿಳಿಸಿದರು.
ಶಾಲಾ ಪ್ರಾಂಶುಪಾಲ ಪಿ.ಕೆ.ಸುನೀಲ್ ಅಧ್ಯಕ್ಷತೆ ವಹಿಸಿದ್ದರು. ನಗರ ಠಾಣೆ ಎಸ್.ಐ ರಾಮಕೃಷ್ಣನ್ ಶಾಲೆಗಲಲ್ಲಿ ವಿದ್ಯಾರ್ಥಿಗಳ ರಕ್ಷಣೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಗತಿ ನಡೆಸಿದರು.
ಜಿಲ್ಲಾ ಕ್ರೈಂ ಬ್ರಾಂಚ್ ಡಿವೈಎಸ್ಪಿ ಟಿ.ಉತ್ತಮದಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಞಂಗಾಡ್ ಹಾಗೂ ಕಾಸರಗೋಡು ಎಚ್.ಎಂ.ಫೆÇೀರಂ ಸಂಚಾಲಕರಾದ ಅಬ್ದುಲ್ ಬಶೀರ್, ಕೆ.ವಿಜಯನ್, ಕಾಸರಗೋಡುಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಮುಖ್ಯ ಶಿಕ್ಷಕಿ ಎ.ಉಷಾ, ಹೈಯರ್ ಸೆಕೆಂಡರಿ ಶಾಲಾ ಪ್ರಧಾನ ಸಂಯೋಜಕ ಅರವಿಂದಾಕ್ಷನ್, ಶ್ರೀಷ್ಮಾ, ಫಾತಿಮಾ ಮೊದಲಾದವರು ಉಪಸ್ಥಿತರಿದ್ದರು.


