ಪೆರ್ಲ : ಮನುಷ್ಯನು ಇಂದು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾನೆ. ಜಗತ್ತಿನಲ್ಲಿ ಶ್ರೇಷ್ಠ ಜನ್ಮವಾದ ಮಾನವ ಜನ್ಮಕ್ಕೆ ಶತಾಯುಷ್ಯದ ಸಂಕಲ್ಪ ಇದ್ದರೂ ಮನುಷ್ಯ ಅದನ್ನು ಕಳೆದುಕೊಂಡು ಬಲಹೀನನಾಗುತ್ತಿದ್ದಾನೆ. ಆದರೆ ದೇವತಾ ಸಂಕಲ್ಪದ ಆರಾಧನೆ ಮಾತ್ರವೇ ಈ ಸಂದರ್ಭದಲ್ಲಿ ನಮ್ಮೊಳಗೆ ಮಾನಸಿಕ ಶಕ್ತಿ ವೃದ್ಧಿಗೆ ಸಹಕಾರಿ. ಆದ್ದರಿಂದ ಭಕ್ತ ಜನ ಜೀವನದಲ್ಲಿ ಮಾತ್ರ ನೆಮ್ಮದಿ ಸಾಧ್ಯ ಎಂದು ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮಧರ್ಶಿ ಶ್ರೀಶ್ರೀಕೃಷ್ಣ ಗುರೂಜಿ ಅಭಿಪ್ರಾಯಪಟ್ಟರು.
ಅವರು ಕಾನ ಶ್ರೀ ಮಲರಾಯಿ ಧೂಮಾವತೀ ಜಟಾಧಾರಿ ನಾಗ ಪರಿವಾರ ದೈವಸ್ಥಾನದಲ್ಲಿ ಶ್ರೀಮಲರಾಯಿ ದೈವದ ಪ್ರತಿಷ್ಠೆ ಹಾಗೂ ಒಂಭತ್ತನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಕಪ್ಪ ಸುವರ್ಣ ಬಾಡೂರು ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಮೂರ್ತೆದಾರರ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಹೇಮನಾಥ ಶೆಟ್ಟಿ ಕಾವು ಮುಖ್ಯ ಅತಿಥಿಗಳಾಗಿದ್ದರು.
ಶಿವಪ್ಪ ಪೂಜಾರಿ ಎಣ್ಮಕಜೆ, ಉಮೇಶ್ ಬಳ್ಪ,ನ್ಯಾಯವಾದಿ ಮಾನಸ ಭಟ್ ಪೆಲ್ತಾಜೆ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಕೆಲಸ ಕಾರ್ಯಗಳಲ್ಲಿ ಪರಿಶ್ರಮಪಟ್ಟವರನ್ನು ಗೌರವಿಸಲಾಯಿತು. ಸಾಹಿತಿ ಎಂ.ಕೆ.ಕುಕ್ಕಾಜೆ ಧಾರ್ಮಿಕ ಉಪನ್ಯಾಸಗೈದರು. ವೇದಾವತಿ ಪುತ್ತೂರು ಸ್ವಾಗತಿಸಿ ನಿರೂಪಿಸಿದರು.

.jpg)
