ಉಪ್ಪಳ: ಚಿಪ್ಪಾರು ಅಮ್ಮೇರಿ ಶ್ರೀ ಬ್ರಹ್ಮ ಬೈದೆರ್ಕಳ ಗರಡಿಯಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ 2026ರ ಪೂರ್ವಭಾವಿಯಾಗಿ ಶನಿವಾರ ಗೊನೆ ಮುಹೂರ್ತ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿತು.
ಶುಭ ಮುಹೂರ್ತದಲ್ಲಿ ವಿಶೇಷ ಪೂಜೆ, ಹೋಮ-ಹವನಗಳು ಜರುಗಿದ ಬಳಿಕ ದೇವರ ಅನುಗ್ರಹದಿಂದ ಗೊನೆ ಮುಹೂರ್ತ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ವೆಂಕಪ್ಪ ಪೂಜಾರಿ ಅಮ್ಮೇರಿ, ರವೀಂದ್ರ ಪೂಜಾರಿ ಅಮ್ಮೇರಿ, ಅಶೋಕ ಎಂ.ಸಿ. ಲಾಲ್‍ಬಾಗ್, ಅಧ್ಯಕ್ಷ ಸದಾನಂದ ಎ. ಬಾಯರು, ಪ್ರಧಾನ ಕಾರ್ಯದರ್ಶಿ ಅಜಿತ್ ಎಂ.ಸಿ. ಲಾಲ್‍ಬಾಗ್, ಕಿಶೋರ್ ಅಮ್ಮೇರಿ ಹಾಗೂ ಸುರೇಂದ್ರ ಎ. ಉಪಸ್ಥಿತರಿದ್ದರು. ಜನವರಿ 31 ರಂದು ಜರಗಲಿರುವ ಜಾತ್ರಾ ಮಹೋತ್ಸವವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳು ಜರಗಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

.jpg)
.jpg)
