ಪೆರ್ಲ: ಮಣಿಯಂಪಾರೆ ದುರ್ಗಾನಗರದ ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯದಂಗವಾಗಿ ಅನುಜ್ಞಾ ಕಲಶ ಹಾಗೂ ಬಾಲಾಲಯ ಪ್ರತಿಷ್ಠೆ ವೇದಮೂರ್ತಿ ಚಂದ್ರಶೇಖರ ನಾವಡ ಬಜಕೂಡ್ಲು ಅವರ ಮಾರ್ಗದರ್ಶನದಲ್ಲಿ ಜರಗಿತು. ಇದರಂಗವಾಗಿ ಬೆಳಗ್ಗೆ ಮಂದಿರದಲ್ಲಿ ಗಣಹೋಮ, ಅನುಜ್ಞ ಕಲಶಾದಿ ಕಾರ್ಯಗಳು ನಡೆದವು. ಈ ಸಂದರ್ಭದಲ್ಲಿ ಮಂದಿರದ ಸ್ಥಾಪಕ ಸದಸ್ಯ ಗೋವಿಂದ ನಾಯ್ಕ ಅರೆಮಂಗಿಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಂಞಣ್ಣ ಮಾಸ್ತರ್ ನೆಕ್ಕರೆಪದವು, ಕೋಶಾಧಿಕಾರಿ ಉದಯ ಚೆಟ್ಟಿಯಾರ್ ಪೆರ್ಲ,ಸೇವಾ ಸಮಿತಿಯ ಅಧ್ಯಕ್ಷ ಅನಂದ ಅರೆಮಂಗಿಲ,ರಾಮಕೃಷ್ಣ ಗುರುಸ್ವಾಮಿ ಮತ್ತು ಶಿಷ್ಯಂದಿರು ಹಾಗೂ ಸಮಿತಿ ಸದಸ್ಯರು, ಊರ ಸಮಸ್ತರು ಪಾಲ್ಗೊಂಡಿದ್ದರು.

.jpg)
