ಕಾಸರಗೋಡು: ಪಾಶ್ಚಿಮಾತ್ಯ ಸಂಸ್ಕøತಿಯನ್ನು ಅನುಸರಿಸದೆ, ಭಾರತದ ಸಾಂಸ್ಕೃತಿಕ ಮೌಲ್ಯಗಳನ್ನು ಸಂರಕ್ಷಿಸುವ ಕೆಲಸ ಬಾಲಗೋಕುಲಗಳಿಂದ ನಡೆದುಬರುತ್ತಿರುವುದಾಗಿ ಬಾಲಗೋಕುಲ ಜಿಲ್ಲಾ ಅಧ್ಯಕ್ಷ ಪಿ.ಆರ್. ಶ್ರೀಯುಕ್ತ ಹೇಳಿದ್ದಾರೆ.
ಬಾಲಗೋಕುಲಂನ ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ನಗರದ ಪಲಕುನ್ನುವಿನಲ್ಲಿ 'ಸುಕೃತಂ ಕೇರಳ ಸಾಂಸ್ಕøತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಶ್ರೀಯುಕ್ತಾ ಮುಖ್ಯ ಭಾಷಣ ಮಾಡಿದರು.
ಕಾಞಂಗಾಡ್ ಗೋಕುಲ ಜಿಲ್ಲಾ ಪೆÇೀಷಕ ಕೆ.ವಿಗಣೇಶನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಡಾ.ಸಿ.ಬಾಬು ಅಧ್ಯಕ್ಷತೆ ವಹಿಸಿದ್ದರು. ಪಿ.ಗಂಗಾಧರನ್ ಸ್ವಾಗತಿಸಿ, ಕೆ.ಕೃಷ್ಣನ್ ವಂದಿಸಿದರು. ನಂತರ ಕಲಾ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.
ಬಂದಡ್ಕದಿಂದ ಆರಂಭಗೊಂಡ ಕಲಾ ನೃತ್ಯ ಪ್ರದರ್ಶನ ಪೆÇಯಿನಾಚಿ, ಪೆರಿಯಾ ಬಜಾರ್ ಸೇರಿದಂತೆ ವಿವಿಧೆಡೆ ನಡೆಯಿತು. ಪೆರಿಯದಲ್ಲಿ ನಡೆದ ಕಾರ್ಯಕ್ರಮವನ್ನು ಆರ್‍ಎಸ್‍ಎಸ್ ಜಿಲ್ಲಾ ಸಂಪರ್ಕ ವ್ಯಕ್ತಿ ಬಾಬು ಪುಲ್ಲೂರ್ ಉದ್ಘಾಟಿಸಿದರು. ಶ್ರೀಯುಕ್ತ ಉದಯನಗರ ಮುಖ್ಯ ಭಾಷಣ ಮಾಡಿದರು. ಗೋವಿಂದನ್ ಕೂಡನಂ ಸ್ವಾಗತಿಸಿದರು. ಅಂಬಿಕಾ ಮಾಧವನ್ ವಂದಿಸಿದರು.


