ಕೊಚ್ಚಿ: ಶಬರಿಮಲೆ ಚಿನ್ನದ ದರೋಡೆ ಪ್ರಕರಣದಲ್ಲಿ ತನಿಖಾ ಸಂಸ್ಥೆ ಇ.ಡಿ. ಕಠಿಣ ನಿಲುವುಗಳೊಂದಿಗೆ ಮುಮದುವರಿಯಲಿದೆ ಎಂದು ತಿಳಿದುಬಂದಿದೆ. ವಶದಲ್ಲಿರುವ ಆರೋಪಿಗಳ ಜಾಮೀನು ಅರ್ಜಿಗಳನ್ನು ಸೋಮವಾರ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ವೇಳೆ ಕಸ್ಟಡಿ ಅವಧಿ ವಿಸ್ತರಿಸಲು ಇ.ಡಿ. ಅಪೇಕ್ಷೆ ಸಲ್ಲಿಸಲಿದೆ. ಆರೋಪಿಗಳನ್ನು ಬಂಧನ ಮುಂದುವರಿಸಲು ನ್ಯಾಯಾಲಯ ಸೂಚಿಸಿದರೆ, ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿ ಮತ್ತು ಇತರರನ್ನು ಇಡಿ ವಿವರವಾಗಿ ಪ್ರಶ್ನಿಸುತ್ತದೆ.
ದೇವಸ್ವಂನ ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಮತ್ತು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪಿ ಎಸ್ ಪ್ರಶಾಂತ್ ಅವರನ್ನು ಪ್ರಶ್ನಿಸಲು ಇಡಿ ಕಾರ್ಯವಿಧಾನಗಳನ್ನು ಪ್ರಾರಂಭಿಸಿದೆ. ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಯೊಂದಿಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ಕಡಕಂಪಳ್ಳಿ ಅವರನ್ನು ಪ್ರಶ್ನಿಸಲಾಗುತ್ತಿದೆ.
ಶಬರಿಮಲೆ ಚಿನ್ನದ ದರೋಡೆ ಪ್ರಕರಣದ ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ದೇವಸ್ಥಾನದಿಂದ ಕಳೆದುಹೋದ ಚಿನ್ನದ ಮೌಲ್ಯವನ್ನು ಆಧರಿಸಿ ಇಡಿಯ ಕ್ರಮ ಇರುತ್ತದೆ. ಜಾರಿ ನಿರ್ದೇಶನಾಲಯವು ಇದಕ್ಕಾಗಿ ಕ್ರಮಗಳನ್ನು ಸಹ ಪ್ರಾರಂಭಿಸಿದೆ. 2019 ರಿಂದೀಚೆಗಿನ ಎಲ್ಲಾ ಅನುಮಾನಾಸ್ಪದ ವಹಿವಾಟುಗಳನ್ನು ವಿವರವಾಗಿ ಪರಿಶೀಲಿಸಲಾಗುವುದು ಎಂದು ಇಡಿ ಮೂಲಗಳು ಸ್ಪಷ್ಟಪಡಿಸಿವೆ.

