ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್.ಎಸ್.ಎಸ್.ಘಟಕ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಪ್ತದಿನ ಸಹವಾಸ ಶಿಬಿರ ಗುರುವಾರ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಹೈಯರ್ ಸೆಕೆಂಡರಿ ಶಾಲಾ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ವಹಿಸಿದ್ದರು. ಗ್ರಾ.ಪಂ.ಸದಸ್ಯ ಸುಧಾಕರ ಮಾಸ್ತರ್ ಉದ್ಘಾಟಿಸಿದರು. ಧಾರ್ಮಿಕ ಮುಂದಾಳು, ನಿವೃತ್ತ ಅಧ್ಯಾಪಕ ಸದಾನಂದ ಮಾಸ್ತರ್ ಕುದ್ವ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಪಿಟಿಎ ಅಧ್ಯಕ್ಷ ಸುಧಾಕರ ಕಲ್ಲಗದ್ದೆ, ಉಪಾಧ್ಯಕ್ಷ ಶ್ಯಾಮ ಸುಂದರ್, ಬಾಳೆಮೂಲೆ ಶಾಲಾ ಮುಖ್ಯೋಪಾಧ್ಯಾಯ ರಾಜೇಶ್ ಬಿ, ಶಾಲಾ ಎಸ್.ಎಸ್.ಜಿ.ಅಧ್ಯಕ್ಷ ಬಟ್ಯ ಮಾಸ್ತರ್, ಎಸ್.ಎಂ.ಸಿ. ಸದಸ್ಯ ನಾರಾಯಣ, ವಿಷ್ಣು ಭಟ್ ಬಾಳೆಮೂಲೆ, ಶಾಲಾ ಆಡಳಿತ ಸಮಿತಿಯ ಲೋಕನಾಥ ಶೆಟ್ಟಿ ಮಾಯಿಲೆಂಗಿ, ನಿವೃತ್ತ ವಾಯುಸೇನಾಧಿಕಾರಿ ನರಸಿಂಹ ಭಟ್, ಸುನಿಲ್ ಕೆಂಗಣಾಜೆ, ಪ್ರಸಾದ ರೈ ಮುಂಗ್ಲಿಕಾನ, ಮಹಾಲಿಂಗ, ಹರೀಶ್, ಸುರೇಶ್, ಪ್ರಭಾಕರ ರೈ, ಶಶಿಕುಮಾರ್ ಶೆಟ್ಟಿ, ರವಿ, ನಾರಾಯಣ ನಾಯ್ಕ ಉಪಸ್ಥಿತರಿದ್ದರು. ಎನ್.ಎಸ್.ಎಸ್.ನಾಯಕರಾದ ಗಗನ ರಾಜ್ ಮತ್ತು ಗ್ರೀಷ್ಮ, ಶಿಕ್ಷಕಿ ಅಕ್ಷತಾ ಭಟ್ ಅನುಭವಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳು ಉತ್ತಮ ಆರೋಗ್ಯ ಮತ್ತು ಮಾದಕವಸ್ತು ವಿರುದ್ಧ ಪ್ರತಿಜ್ಞೆ ಸ್ವೀಕರಿಸಿದರು.
ಬಾಳೆಮೂಲೆ ಶಾಲಾ ಮುಖ್ಯೋಪಾಧ್ಯಾಯ ರಾಜೇಶ್ ಬಿ.ಸ್ವಾಗತಿಸಿ, ಎನ್.ಎಸ್.ಎಸ್.ಯೋನಾಧಿಕಾರಿ ವಾಣಿ ಕೆ. ವಂದಿಸಿದರು. ಕಾಟುಕುಕ್ಕೆ ಶಾಲಾ ಪ್ರಾಧ್ಯಾಪಕ ಶ್ಯಾಮ ಮಾಸ್ತರ್ ನಿರೂಪಿಸಿದರು. ಶಿಬಿರ ನಡೆಸಲು ಅನುವು ಮಾಡಿದ ಬಾಳೆಮೂಲೆ ಶಾಲೆಗೆ ಪುಸ್ತಕ ಸಹಿತ ವಿವಿಧ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು.

.jpg)
