ಪೆರ್ಲ : ಸೇರಾಜೆ ಸಮೀಪದ ಕಾನ ಶ್ರೀ ಮಲರಾಯಿ ಧೂಮಾವತೀ ಜಟಾಧಾರಿ ನಾಗ ಪರಿವಾರ ದೈವಸ್ಥಾನದ ಒಂಭತ್ತನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವ, ವಿಶೇಷವಾಗಿ ಶ್ರೀ ಮಲರಾಯಿ ದೈವದ ಪ್ರತಿಷ್ಠೆ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಅವರ ನೇತೃತ್ವದಲ್ಲಿ ಜನವರಿ 18 ರಿಂದ 21ರ ತನಕ ಜರಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದಲ್ಲಿ ನಡೆಯಿತು. ಬಾಬು ಪೂಜಾರಿ ಕಾನ, ಸಂಕಪ್ಪ ಸುವರ್ಣ ಬಾಡೂರು, ವೇದಾವತಿ ಪುತ್ತೂರು, ಗಿರಿಯಪ್ಪ ಪೂಜಾರಿ ಗುಂಡಿತ್ತಾರು, ಸಂಜೀವ ಕಾನ, ಸುರೇಶ್ ಕಾನ, ಸುಂದರ ಪೂಜಾರಿ ಪೆರಿಯಡ್ಕ, ನಾರಾಯಣ ಪೂಜಾರಿ ಗುಂಡಿತ್ತಾರು, ಗಣೇಶ ಗೋಳಿತ್ತಾರು, ಸರೋಜ ಕಾನ, ಯಶೋದ ಕಾನ, ಪ್ರಜುಲ ಕಾನ, ಗೀತಾ ಮೊದಲಾವರು ಉಪಸ್ಥಿತರಿದ್ದರು. ಪ್ರತಿಷ್ಠೆ ಹಾಗೂ ವಾರ್ಷಿಕೋತ್ಸವದ ಪೂರ್ವಭಾವಿ ಇದೀಗ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಕುಟುಂಬಸ್ಥರು, ಮಹಿಳಾ ಸಮಿತಿ, ಊರ ಹತ್ತು ಸಮಸ್ತರು ಸಹಕಾರ ನೀಡುತ್ತಿದ್ದಾರೆ.

.jpg)
