ಮುಳ್ಳೇರಿಯ: ಕ್ಯಾಂಪ್ಕೋ "ಸಾಂತ್ವನ" ಯೋಜನೆಯ ಅಂಗವಾಗಿ ಪರಪ್ಪ, ಕಮ್ಮಡತ್ ನಿವಾಸಿ ಹಾಗೂ ಕ್ಯಾಂಪ್ಕೋದ ಸಕ್ರಿಯ ಸದಸ್ಯ ಎನ್.ಮೊಯ್ದೀನ್ ಕುಂಞÂ್ಞ ಅವರಿಗೆ ಚಿಕಿತ್ಸಾ ನೆರವಾಗಿ ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣನ್ ಕರಿಂಬಿಲ್ ಅವರು ಸದಸ್ಯರ ನಿವಾಸದಲ್ಲಿ 69,990 ರೂ.ಗಳ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬದಿಯಡ್ಕ ವಲಯ ಪ್ರಬಂಧಕ ಚಂದ್ರ ಬಿ.ಎಂ, ಪರಪ್ಪ ಶಾಖಾ ವ್ಯವಸ್ಥಾಪಕ ಜನಾರ್ದನನ್ ನಾಯರ್ ಎ, ಕಾಞಂಗಾಡ್ ನ ಪ್ರಬಂಧಕ ಹರಿಪ್ರಸಾದ್, ಸದಸ್ಯರಾದ ಪ್ರಮೋದ್ ವಣರ್ಂ ಮತ್ತು ಶಾಖಾ ಸಿಬ್ಬಂದಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ನೆರವು ಯೋಜನೆ ಕ್ಯಾಂಪ್ಕೋ ತನ್ನ ಸದಸ್ಯರ ಕಲ್ಯಾಣಕ್ಕಾಗಿ ಮತ್ತು ಅಗತ್ಯದ ಸಮಯದಲ್ಲಿ ಸದಸ್ಯರ ಬಗ್ಗೆ ಸಂಸ್ಥೆಗಿರುವ ಕಾಳಜಿಯನ್ನು ಮತ್ತು ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟರು.

.jpg)
