ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಸಿಡಿಎಸ್ ಸಭಾ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯ ಬಾಲಕೃಷ್ಣ ಶೆಟ್ಟಿ ಕೆ.ಅಧ್ಯಕ್ಷತೆ ವಹಿಸಿದ್ದರು. `ಸ್ನೇಹವೀಡ್' ಯೋಜನೆಗೆಯನ್ನು ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ.ಉದ್ಘಾಟಿಸಿ ಮಾತನಾಡಿ, ಮಹಿಳೆಯರೂ ಜನಪ್ರತಿನಿಧಿಗಳಾಗಿ ಜನಸೇವಾಕಾರ್ಯದಲ್ಲಿ ನಿರಂತರ ತೊಡಗಿಕೊಳ್ಳಲು ಕುಟುಂಬಶ್ರೀಯಲ್ಲಿನ ಅವರ ಅನುಭವವೂ ಕಾರಣವಾಗಿದೆ. ಅನೇಕರು ಇಂದು ಚುನಾವಣೆಯಲ್ಲಿ ಸ್ಪರ್ಧೆಗೆ ತಯಾರಾಗಿದ್ದಾರೆ. ಸಂಘಟನೆಯನ್ನು ಶಕ್ತಿಯುತವಾಗಿ ಬೆಳೆಸುವಲ್ಲಿಯೂ ಮಹಿಳೆಯರ ಪಾತ್ರವಿದೆ ಎಂದರು.
ಕುಟುಂಬಶ್ರೀ ಜಿಲ್ಲಾ ಅಧಿಕಾರಿ ಯದುರಾಜ್ `ಸ್ನೇಹವೀಡ್'ನ ಮಾಹಿತಿಯನ್ನು ನೀಡಿದರು. ಕುಟುಂಬಶ್ರೀ ನೇತೃತ್ವದಲ್ಲಿ ನಡೆಯುವ `ಸ್ನೇಹವೀಡ್' ಯೋಜನೆಗೆ ಉಪಾಧ್ಯಕ್ಷೆ ಧನಸಹಾಯ ಹಸ್ತಾಂತರಿಸಿದರು. ಪಾಲ್ಗೊಂಡ ಜನಪ್ರತಿನಿಧಿಗಳನ್ನು ಶಾಲು ಹೊದೆಸಿ ಅಭಿನಂದಿಸಲಾಯಿತು. ಸಿಡಿಎಸ್ ಚೇರ್‍ಪರ್ಸನ್ ಅನಿತಾ ಕ್ರಾಸ್ತ ಸ್ವಾಗತಿಸಿ, ಸಹಾಯಕ ಚೇರ್‍ಪರ್ಸನ್ ಪ್ರೇಮಾ ವಂದಿಸಿದರು.

.jpg)
