ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ 13ನೇ ವಾರ್ಡು ಕಾರ್ಯಕರ್ತರಿಂದ ವಿಜೇತ ಅಭ್ಯರ್ಥಿ ಅಶ್ವಿನಿ ಕೆ.ಎಂ. ಅವರಿಗೆ ಅಭಿನಂದನೆ ಕಾರ್ಯಕ್ರಮ ಬೀಜಂತಡ್ಕ ಈಳಂತೋಡಿಯಲ್ಲಿ ಜರಗಿತು. ಗ್ರಾಮಪಂಚಾಯಿತಿ ಅಧ್ಯಕ್ಷ ಡಿ.ಶಂಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿರಿಯರಾದ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ತ್ರಿಸ್ಥರ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಗಳನ್ನು ಈ ಸಂದರ್ಭದಲ್ಲಿ ಊರಿನ ಪ್ರಮುಖರು ಶಾಲು ಹೊದೆಸಿ ಅಭಿನಂದಿಸಿದರು.
ಜಿಲ್ಲಾಪಂಚಾಯತಿ ಬದಿಯಡ್ಕ ಡಿವಿಶನ್ ಸದಸ್ಯ ರಾಮಪ್ಪ ಮಂಜೇಶ್ವರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ವಾರ್ಡು ಸದಸ್ಯೆ ಹಾಗೂ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಮಾತನಾಡಿ 25 ವರ್ಷಗಳ ಬಳಿಕ ಬದಿಯಡ್ಕ ಗ್ರಾಮಪಂಚಾಯಿತಿಯ ಅಧಿಕಾರ ಬಿಜೆಪಿಗೆ ಲಭಿಸುವಲ್ಲಿ ಪೆರಡಾಲ ವಾರ್ಡಿನ ಕೊಡುಗೆಯಿದೆ. ನಿಮ್ಮೆಲ್ಲರ ಆಶೋತ್ತರಗಳನ್ನು ಈಡೇರಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು. ಬ್ಲಾಕ್ ಪಂಚಾಯಿತಿ ಸದಸ್ಯ ಮಹೇಶ್ ವಳಕ್ಕುಂಜ, ಗ್ರಾಮಪಂಚಾಯಿತಿ ಸದಸ್ಯರುಗಳಾದ ಅವಿನಾಶ್ ವಿ ರೈ, ಶ್ಯಾಮಪ್ರಸಾದ ಸರಳಿ, ಮದುಸೂದನ ಉಕ್ಕಿನಡ್ಕ, ಪಕ್ಷದ ಪ್ರಮುಖರಾದ ಜಯರಾಮ ಚೆಟ್ಟಿಯಾರ್ ಬದಿಯಡ್ಕ, ನರೇಂದ್ರ ಬದಿಯಡ್ಕ, ನಾರಾಯಣ ಭಟ್ ಮೈರ್ಕಳ ಮಾತನಾಡಿದರು. ಇದೇ ಸಂದರ್ಭದಲ್ಲಿ 13ನೇ ವಾರ್ಡಿನ ಅಭ್ಯರ್ಥಿ ಅಶ್ವಿನಿ ಕೆ.ಎಂ. ಅವರ ಪರಿಚಯದ ಕ್ಯಾಲೆಂಡರ್‍ನ್ನು ಮತದಾರರಿಗೆ ವಿತರಿಸಲಾಯಿತು.

.jpg)
