ಕ್ರಿಸ್‌ಮಸ್ ರಜೆಗೆ ಪ್ಲೋರಿಡಾದ ಫಾಲ್ ರೆಸಾರ್ಟ್ ಬೀಚ್‌ನಲ್ಲಿರುವ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಜೊತೆ ಎಲೋನ್ ಮಸ್ಕ್ ಅವರು ಊಟ ಸವಿದಿದ್ದಾರೆ.
ಅಧ್ಯಕ್ಷರ ಜೊತೆ ಊಟ ಮಾಡುತ್ತಿರುವ ಫೋಟೊ ಹಂಚಿಕೊಂಡಿರುವ ಎಲೋನ್, ಲವ್ಲಿ ಡಿನ್ನರ್ ಎಂದು ಬರೆದುಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ನಂತರ DODGE ವಿಚಾರವಾಗಿ ಟ್ರಂಪ್ ಜೊತೆ ಮಸ್ಕ್ ಮುನಿಸಿಕೊಂಡಿದ್ದರು. ಆ ಬಳಿಕ ಅವರು ಮತ್ತೆ ಒಟ್ಟಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಊಟದ ಫೋಟೊ ಹಂಚಿಕೊಂಡ ನಂತರ ಟ್ರಂಪ್ ಮತ್ತೇ ಎಲಾನ್ ಒಂದಾಗಿದ್ದಾರೆ ಎನ್ನಲಾಗುತ್ತಿದೆ.

