ಕಾಸರಗೋಡು: ಗಣರಾಜ್ಯೋತ್ಸವ ಯಶಸ್ವಿಯಾಗಿ ಆಚರಿಸುವ ಬಗ್ಗೆ ಸಮಾಲೋಚನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಪಿ. ಅಖಿಲ್ ಅಧ್ಯಕ್ಷತೆ ವಹಿಸಿದ್ದರ. ಗಣರಾಜ್ಯೋತ್ಸವ ಪಥಸಂಚಲನ ಪೂರ್ವಾಭ್ಯಾಸ ಜ.22 ಮತ್ತು 23 ರಂದು ಮಧ್ಯಾಹ್ನ 2 ಗಂಟೆಗೆ ಮತ್ತು 24 ರಂದು ಬೆಳಿಗ್ಗೆ 8 ಗಂಟೆಗೆ ವಿದ್ಯಾನಗರದ ಕಾಸರಗೋಡು ಮುನ್ಸಿಪಲ್ ಕ್ರೀಡಾಂಗಣದಲ್ಲಿ ಪೂರ್ವಾಭ್ಯಾಸ ನಡೆಸಲು ತೀರ್ಮಾನಿಸಲಾಯಿತು. ಪಥಸಂಚಲನದಲ್ಲಿ ಭಾಗವಹಿಸುವ ಎಲ್ಲರೂ 24 ರಂದು ಬೆಳಿಗ್ಗೆ ಸಮವಸ್ತ್ರದಲ್ಲಿ ಪೂರ್ವಾಭ್ಯಾಸಕ್ಕೆ ಬರುವಂತೆ ಸೂಚಿಸಲಾಯಿತು.
ಶಿಬಿರದ ಸಹಾಯಕ ಕಮಾಂಡೆಂಟ್ ಪಥಸಂಚಲನ ಆಯೋಜಿಸಲಿದ್ದು, ಸಂಪೂರ್ಣ ಕಾರ್ಯಖ್ರಮ ಪ್ಲಾಸ್ಟಿಕ್ ಮುಕ್ತವಾಗಿಸಲು ಮತ್ತು ಹಸಿರು ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ಶುಚಿತ್ವ ಮಿಷನ್ ಹಸಿರು ಶಿಷ್ಟಾಚಾರವನ್ನು ಸಿದ್ಧಪಡಿಸುವ ಕಾರ್ಯ ಕೈಗೊಳ್ಳಲಿದ್ದು, ಇದರ ಜವಾಬ್ದಾರಿಯನ್ನು ಜಿಲ್ಲಾ ಸಂಯೋಜಕರಿಗೆ ಮತ್ತು ವಿವಿಧ ಇಲಾಖೆಗಳಿಗೆ ವಹಿಸಲಾಗುವುದು. ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಆಯಾ ಇಲಾಖೆಯ ಜಿಲ್ಲಾ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಜನವರಿ 25 ರಂದು ಸಂಜೆ 4 ಗಂಟೆಯೊಳಗೆ ಕಲೆಕ್ಟರೇಟ್‍ನ ಹುಜೂರ್ ಶಿರಸ್ತೇದಾರ್ ಅವರಿಂದ ಎ.ಆರ್. ಕ್ಯಾಂಪ್ ಸಹಾಯಕ ಕಮಾಂಡೆಂಟ್ ಅವರು ರಾಷ್ಟ್ರಧ್ವಜವನ್ನು ಸ್ವೀಕರಿಸಲಿದ್ದಾರೆ. ಧ್ವಜಸ್ತಂಭದಲ್ಲಿ ಧ್ವಜಾರೋಹಣದ ನಂತರ ರಾಷ್ಟ್ರಧ್ವಜವನ್ನು ವಾಪಾಸು ತಂದೊಪ್ಪಿಸುವ ಕೆಲಸವನ್ನು ಸಹಾಯಕ ಕಮಾಂಡರ್‍ಗೆ ವಹಿಸಲಾಯಿತು. ಜಿಲ್ಲೆಯ ವಿವಿಧ ಇಲಾಖೆಗಳಿಗೆ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.
ಸಭೆಯಲ್ಲಿ ಕಂದಾಯ ವಿಭಾಗೀಯ ಅಧಿಕಾರಿ ಬಿನು ಜೋಸೆಫ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ. ರಮೇಶನ್, ಕಾಞಂಗಾಡ್ ಆರ್‍ಡಿಒ ಕಚೇರಿಯ ಕಿರಿಯ ಅಧೀಕ್ಷಕ ಪಿ. ಗೋಪಾಲಕೃಷ್ಣನ್ ಮತ್ತು ಸೈನಿಕ ಕಲ್ಯಾಣ ಅಧಿಕಾರಿ ಟಿ.ಟಿ. ಬಿನೀಶ್‍ಕುಮಾರ್ ಉಪಸ್ಥಿತರಿದ್ದರು.

