ಕಾಸರಗೋಡು: ರಾಷ್ಟ್ರೀಯ ಅಧ್ಯಾಪಕ ಪರಿಷತ್(ಎನ್‍ಟಿಯು)47ನೇ ಕೇರಳ ರಾಜ್ಯ ಸಮ್ಮೇಳನ ಜ.22ರಿಂದ 24ರ ವರೆಗೆ ಕಾಸರಗೋಡು ನಗರಸಭಾಂಗಣದ'ಜಯಕೃಷ್ಣನ್ ಮಾಸ್ಟರ್ ನಗರ'ದಲ್ಲಿ ಜರುಗಲಿದೆ. 22ರಂದು ಸಂಜೆ 5ಕ್ಕೆ ಎನ್‍ಟಿಯು ಸಮಸ್ತ ರಾಜ್ಯ ಸಮಿತಿ ಪದಾಧಿಕಾರಿಗಳ ಸಭೆ ಕೂಡ್ಲು ರಾಮದಾಸ ನಗರದಲ್ಲಿರುವ ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯಾಲಯದಲ್ಲಿ ಜರುಗಲಿದೆ. ಆರೆಸ್ಸೆಸ್ ಕಣ್ಣೂರು ವಿಭಾಗ ಸಹ ಕಾರ್ಯವಾಹ ಲೋಕೇಶ್ ಜೋಡುಕಲ್ಲು ಸಮಾರಂಭ ಉದ್ಘಾಟಿಸುವರು. ಎನ್‍ಟಿಯು ರಾಜ್ಯ ಸಮಿತಿ ಅಧ್ಯಕ್ಷ ಕೆ. ಸ್ಮಿತಾ ಅಧ್ಯಕ್ಷತೆ ವಹಿಸುವರು.
23ರಂದು ಬೆಳಗ್ಗೆ 9ಕ್ಕೆ ಜಯಕೃಷ್ಣನ್ ಮಾಸ್ಟರ್ ನಗರದಲ್ಲಿ ನಡೆಯುವ ಸಮ್ಮೇಳನದಲ್ಲಿ ಕೆ. ಸ್ಮಿತಾ ಧ್ವಜಾರೋಹಣ ನಡೆಸಿ, ಸಮಾರಂಭದ ಅಧ್ಯಕ್ಷತೆ ವಹಿಸುವರು. ಎಬಿಆರ್‍ಎಸ್‍ಎಂ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಕಪೂರ್ ಸಮಾರಂಭ ಉದ್ಘಾಟಿಸುವರು. ಬಿಎಂಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ, ವಕೀಲ ಪಿ ಮುರಳೀಧರನ್, ಎನ್‍ಜಿಓ ಸಂಘ್ ರಾಜ್ಯ ಸಮಿತಿ ಸದಸ್ಯ ಪಿತಾಂಬರನ್ ಪಾಳ್ಗೊಳ್ಳುವರು. ಮಧ್ಯಾಹ್ನ 2.30ಕ್ಕೆ ನಡೆಯುವ ಸಂಘಟನಾ ಸಮ್ಮೇಳನವನ್ನು ಆರ್‍ಎಸ್‍ಎಸ್ ದಕ್ಷಿಣ ಕೇರಳ ಬೌದ್ಧಿಕ್ ಪ್ರಮುಖ್ ಪಿ ಉಣ್ಣಿಕೃಷ್ಣನ್ ಉದ್ಘಾಟಿಸುವರು. ಸಂಘಟನೆ ರಾಜ್ಯ ಉಪಾಧ್ಯಕ್ಷ ಪಾರಂಗೋಡ್ ಬಿಜು ಅಧ್ಯಕ್ಷತೆ ವಹಿಸುವರು.
ಜ.24ರಂದು ಬೆಳಗ್ಗೆ 9ಕ್ಕೆ ನಡೆಯುವ ಸಮಾರಂಭದಲ್ಲಿ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಮಾರಂಭ ಉದ್ಘಾಟಿಸುವರು. ಎನ್‍ಟಿಯು ರಾಜ್ಯಾಧ್ಯಕ್ಷೆ ಕೆ. ಸ್ಮಿತಾ ಅಧ್ಯಕ್ಷತೆ ವಹಿಸುವರು. ಎಬಿಆರ್‍ಎಸ್‍ಎಂ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಕಪೂರ್ ಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭ ನಡೆಯುವ ಬೀಳ್ಕೊಡುಗೆ ಸಮಾರಂಭವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಎಂ. ಟಿ. ರಮೇಶ್ ಉದ್ಘಾಟಿಸುವರು.
ಮಧ್ಯಾಹ್ನ 2ಗಂಟೆಗೆ ನಡೆಯುವ ಶೈಕ್ಷಣಿಕ ಸಮ್ಮೇಳನವನ್ನು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರಫೆಸರ್ ಎಸ್.ಪಿ. ಅಲ್ಗೂರ್ ಉದ್ಘಾಟಿಸುವರು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಭೌತಶಾಸ್ತ್ರದ ನಿರ್ದೇಶಕ ಶ್ರೀ ಪಿ. ಶ್ರೀಕುಮಾರ್ ಮುಖ್ಯ ಭಾಷಣ ಮಾಡುವರು.
3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಆರ್‍ಎಸ್‍ಎಸ್ ದಕ್ಷಿಣ ಪ್ರಾಂತ ಪ್ರಭಾತಿಕ್ ಪ್ರಮುಖ್ ಪಿ. ಉನ್ನಿಕೃಷ್ಣನ್ ಅಧ್ಯಕ್ಷತೆ ವಹಿಸುವರು. ಸಂಜೆ 4ಕ್ಕೆ ನಗರಸಭಾಂಗಣ ವಠಾರದಿಂದ ಆರಂಭಗೊಳ್ಳುವ ಭವ್ಯಮೆರವಣಿಗೆ ನಗರದ ಮಲ್ಲಿಕಾರ್ಜುನ ದೇವಸ್ಥಾನ, ಕೆಎಸ್ ಆರ್‍ಟಿಸಿ ಬಸ್ ನಿಲ್ದಾಣ ರಸ್ತೆ ಮೂಲಕ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆಯೊಂದಿಗೆ ಸಮಾರೋಪಗೊಳ್ಳಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 1500ಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವರು.

