ಕಾಸರಗೋಡು: ಚುನಾವಣಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗಾಗಿ ಕಾಸರಗೋಡು ಜಿಲ್ಲೆಗೆ 2026 ರ ಅತ್ಯುತ್ತಮ ಚುನಾವಣಾ ಜಿಲ್ಲೆಗಾಗಿರುವ ರಾಷ್ಟ್ರೀಯ ಚುನಾವಣಾ ಆಯೋಗದ ಪ್ರಶಸ್ತಿ ನೀಡಲಾಗಿದೆ. ಜ. 25 ರಂದು, ನವದೆಹಲಿಯ ಮಾಣಿಕ್‍ಶಾ ಕೇಂದ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರ ನೇತೃತ್ವದಲ್ಲಿ 2024 ರ ಲೋಕಸಭಾ ಚುನಾವಣೆ ಸಂದರ್ಭ ಕ್ಯೂಆರ್ ಕೋಡ್ ಸೇರಿದಂತೆ ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಚುನಾವಣಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
2025 ರಲ್ಲಿ ಅತ್ಯುತ್ತಮ ನವೀನ ವಿಚಾರಗಳನ್ನು ಜಾರಿಗೆ ತಂದು,ಚುನಾವಣಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡಿರುವುದಕ್ಕಾಗಿ ಮುಖ್ಯ ಚುನಾವಣಾ ಅಧಿಕಾರಿಯ ಪ್ರಶಸ್ತಿಯನ್ನು ಕೆ.ಇನ್ಬಾಶೇಖರ್ ಪಡೆದುಕೊಮಡಿದ್ದರು.


