ಕುಂಬಳೆ: ಪುತ್ತಿಗೆ ಕಟ್ಟತ್ತಡ್ಕದ ಮುಹಿಮ್ಮಾತ್ ಸ್ಥಾಪಕ ಸಯ್ಯದ್ ತ್ವಾಹಿರುಲ್ ಅಹ್ದಲ್ ತಙಳ್ ಅವರ 20ನೇ ಉರುಸ್ ಮುಬಾರಕ್ ಮತ್ತು ಪದವಿಪ್ರದಾನ ಸಮ್ಮೇಳನ ಜನವರಿ 28 ರಿಂದ ಮುಹಿಮ್ಮಾತ್‍ನಲ್ಲಿ ನಡೆಯಲಿದೆ. 31 ರಂದು ಶನಿವಾರ ಸಂಜೆ ಪದವಿಪ್ರದಾನ ಸಮಾರಂಭ ನಡೆಯಲಿದ್ದು, ಆಧ್ಯಾತ್ಮಿಕ ಸಭೆಯೊಂದಿಗೆ ಉರುಸ್ ಸಂಪನ್ನಗೊಳ್ಳಲಿರುವುದಾಗಿ ಮುಹಿಮ್ಮತ್ ಕಾರ್ಯದರ್ಶಿ ಬಿ.ಎಸ್ ಅಬ್ದುಲ್ಲಕುಞÂ ಫೈಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್, ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ. ಪಿ. ಅಬೂಬಕರ್ ಮುಸ್ಲಿಯಾರ್ ಮತ್ತು ಇತರ ಗಣ್ಯರು ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉರುಸ್ ಅಂಗವಾಗಿ ಝಿಯಾರತ್, ಘೋಷಣಾ ರ್ಯಾಲಿ, ಕುರಾನ್ ದೌರಾ, ತಮಿಳು ಪ್ರತಿನಿಧಿ ಸಭೆ, ಸ್ವಲಾತ್ ಮಜ್ಲಿಸ್, ಧಾರ್ಮಿಕ ಪ್ರವಚನ, ರಾತೀಬ್-ಮೌಲಿದ್ ಮಜ್ಲಿಸ್, ಸಾಂಸ್ಕøತಿಕ ಸಮ್ಮೇಳನ ಮತ್ತು ಸ್ಮರಣಾರ್ಥ ಸಭೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಜ. 28ರಂದು ಮಧ್ಯಾಹ್ನ 2.30 ಕ್ಕೆ ಇಚಿಲಂಕೋಡ್ ಮಕಾಮ್ ಝಿಯಾರತ್‍ನೊಂದಿಗೆ ಕಾರ್ಯಕ್ರಮಕ್ಕೆ ಔಪಚಾರಿಕ ಚಾಲನೆ ನೀಡಲಾಗುವುದು. ಸಂಜೆ 6.30ಕ್ಕೆ ಉರುಸ್ ಸಮಾರಂಭವನ್ನು ಸಮಸ್ತ ಕೇಂದ್ರ ಮುಶಾವರಂ ಅಧ್ಯಕ್ಷ ಸೈಯದ್ ಇಬ್ರಾಹಿಂ ಹಾದಿ ತಂಗಳ್ ಮತ್ತು ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್ ಉದ್ಘಾಟಿಸುವರು ಎಂದುತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಹಾಜಿ ಅಮೀರಲಿ ಚೂರಿ, ಉಪಾಧ್ಯಕ್ಷ ಪಳ್ಳಂಕೋಡ್ ಅಬ್ದುಲ್ ಖಾದರ್ ಮದನಿ, ಕಾರ್ಯದರ್ಶಿ ಮೂಸಾ ಸಖಾಫಿ ಕಳತ್ತೂರು, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಅಬೂಬಕರ್ ಕಾಮಿಲ್ ಸಖಾಫಿ ಉಪಸ್ಥಿತರಿದ್ದರು.

