ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಇತ್ತೀಚೆಗೆ ಕಾಂತಾವರ ಕನ್ನಡ ಸಂಘ ಪ್ರಕಟಿಸಿದ ಕಾಸರಗೋಡಿನ ಹಿರಿಯ ವೈದ್ಯ, ಖ್ಯಾತ ಸಂಯೋಜಿತ ಚಿಕಿತ್ಸಾ ರೂವಾರಿ ಡಾ.ಎಸ್.ಎರ್. ನರಹರಿನ ಅವರ ಯಶೋಗಾಥೆಗಳ ಬಗ್ಗೆ ಡಾ.ಯು.ಮಹೇಶ್ವರಿ ಬರೆದಿರುವ 'ಡಾ.ನರಹರಿ ಮತ್ತು ಐಎಡಿ' ಕೃತಿಯ ಬಗೆಗೆ ವಿಶಿಷ್ಟ ಸಂವಾದ ಕಾರ್ಯಕ್ರಮ ಇಂದು(ಶುಕ್ರವಾರ) ಅಪರಾಹ್ನ 3.30 ರಿಂದ ಕರಂದಕ್ಕಾಡು ಸಮೀಪದ ಐಎಂಎ. ಸಭಾಂಗಣದಲ್ಲಿ ನಡೆಯಲಿದೆ.
ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಇಂಗ್ಲೆಂಡ್ ನ ನೋಟಿಂಗಂ ಯುನಿವರ್ಸಿಟಿಯ ಪ್ರಾಧ್ಯಾಪಕ ಡಾ.ಗುರುಪ್ರಸಾದ್ ಐತಾಳ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಡಾ.ಶ್ರೀಪತಿ ಕಜಂಪಾಡಿ, ಡಾ.ತೇಜಸ್ವಿ ವ್ಯಾಸ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸ್ನೇಹಲತಾ ದಿವಾಕರ್ ಸಂವಾದಲ್ಲಿ ಮಾತನಾಡುವರು. ಡಾ.ಎಸ್.ಆರ್.ನರಹರಿ ಸಹಿತ ಐಎಡಿ ತಂಡ ಭಾಗವಹಿಸುವರು.
ಸಮಾರಂಭದ ನೇರ ಪ್ರಸಾರ ವೀಕ್ಷಣೆಗೆ ಕೆಳಗಿನ ಲಿಂಕ್ ಬಳಸಿ....https://www.youtube.com/live/S3G8RCGFJ8M?si=Z_vdOHlkP_Ban3V_


