ನವದೆಹಲಿ: ಕೇರಳ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸೌಮೆನ್ ಸೇನ್ ಅವರನ್ನು ನೇಮಕಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸನ್ನು ಕೇಂದ್ರ ಸರ್ಕಾರ ಅಂಗೀಕರಿಸಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಸೌಮೆನ್ ಸೇನ್ ಪ್ರಸ್ತುತ ಮೇಘಾಲಯ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.
ಕೇರಳ ಹೈಕೋರ್ಟ್‍ನ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಅವರು ಜನವರಿ 9 ರಂದು ನಿವೃತ್ತರಾಗುವುದರಿಂದ ಖಾಲಿ ಇರುವ ಸ್ಥಾನವನ್ನು ಸೇನ್ ತುಂಬಲಿದ್ದಾರೆ. ಜನವರಿ 9 ರಂದು ಸೌಮೆನ್ ಸೇನ್ ಹೊಸ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
ನ್ಯಾಯಮೂರ್ತಿ ಸೌಮೆನ್ ಸೇನ್ ಅವರನ್ನು ಕಳೆದ ಆಗಸ್ಟ್‍ನಲ್ಲಿ ಮೇಘಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಅವರ ಅವಧಿ ಜುಲೈ 27, 2027 ರಂದು ಕೊನೆಗೊಳ್ಳುತ್ತದೆ.

