ಮುಳ್ಳೇರಿಯ: ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾಸರಗೋಡು ಸಂಘ ಜಿಲ್ಲೆಯ ಪ್ರಾಥಮಿಕ ಶಿಕ್ಷಾ ವರ್ಗ ಮುಳ್ಳೇರಿಯ ಎ.ಯು. ಪಿ. ಶಾಲೆಯಲ್ಲಿ ಪ್ರಾರಂಭವಾಯಿತು. ಕೇರಳ ಉತ್ತರ ಪ್ರಾಂತ ಸಹಪ್ರಚಾರ ಪ್ರಮುಖ್ ಓ. ಎಂ. ಸಜಿತ್ ದೀಪ ಬೆಳಗಿಸಿದರು. ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ತರ್, ಶಿಬಿರ ಕಾರ್ಯವಾಹ ಸುನಿಲ್ ಅಣಂಗೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯವಾಹ ಪವಿತ್ರನ್ ಕುದ್ರೆಪ್ಪಾಡಿ, ಸಹ ಕಾರ್ಯವಾಹ ರೆಂಜೀವ್ ರಾಘವನ್ ಬೋವಿಕ್ಕಾನ, ಮುಳ್ಳೇರಿಯಾ ಖಂಡ್ ಸಂಘಚಾಲಕ ಡಾ. ರವಿಪ್ರಸಾದ್ ಸಹಿತ ಸಂಘದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

.jpg)
