ಕಾಸರಗೋಡು: ರಾಜ್ಯ ಸರ್ಕಾರದ ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ಫೆಬ್ರವರಿ 8 ರಿಂದ 11 ರವರೆಗೆ ತಿರುವನಂತಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಪರಿಸರ ಸಮ್ಮೇಳನಕ್ಕೆ ಮುಂಚಿತವಾಗಿ, ಯುಪಿ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಜನವರಿ 10 ರಂದು ಉಪ-ಜಿಲ್ಲಾ ಮಟ್ಟದಲ್ಲಿ ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿ ಭಾಗವಹಿಸುವ ಸ್ಪರ್ಧೆಯನ್ನು ಆಯೋಜಿಸಲಾಗುವುದು ಮತ್ತು ಜನವರಿ 17 ರಂದು ವಿಜೇತರಿಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಯಲಿದೆ. ಉಪ-ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಚೆರುವತ್ತೂರು ಪಿಲಿಕೋಡ್ ಜಿಎಚ್‍ಎಸ್‍ಎಸ್, ಚಿತ್ತಾರಿಕ್ಕಲ್ ಪರಪ್ಪ ಜಿಎಚ್‍ಎಸ್‍ಎಸ್, ಹೊಸದುರ್ಗ ಜಿಎಚ್‍ಎಸ್‍ಎಸ್ ಹೊಸದುರ್ಗ, ಬೇಕಲ್ ಬಿಆರ್‍ಸಿ ಬೇಕಲ್, ಕಾಸರಗೋಡು ಜಿಎಚ್‍ಎಸ್ ಕಾಸರಗೋಡು, ಕುಂಬಳೆ ಜಿಎಚ್‍ಎಸ್‍ಎಸ್ ಪೆರಡಾಲ ಮತ್ತು ಮಂಜೇಶ್ವರದ್ದು ಪೈವಳಿಗೆ ನಗರ ಜಿಎಚ್‍ಎಸ್‍ಎಸ್‍ನಲ್ಲಿ ಬೆಳಿಗ್ಗೆ 10 ಗಂಟೆಯಿಂದ ನಡೆಸಲಾಗುವುದು.
ಸ್ಪರ್ಧೆಯಲ್ಲಿ ಆಸಕ್ತಿ ಹೊಂದಿರುವವರು ಈ ಲಿಂಕ್‍ನಲ್ಲಿ ನೋಂದಾಯಿಸಿಕೊಳ್ಳಬೇಕು https://forms.gle/TmYBkxesFE9GNEFi6 ಯು.ಪಿ., ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯು ಜನವರಿ 17 ರಂದು ಬೆಳಿಗ್ಗೆ 10 ಗಂಟೆಯಿಂದ ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆಯಲಿದ್ದು, ಆಸಕ್ತರು ಪ್ರಮಾಣಪತ್ರದೊಂದಿಗೆ ಭಾಗವಹಿಸಬೇಕೆಂದು ºಸಿರು Éೀರಳಂ ಮಿಷನ್‍ನ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.

