ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಏಕಾಂಗಿಯಾಗಿದ್ದ ಬಾಲಕಿಗೆ ಕಿರುಕುಳಕ್ಕೆ ಯತ್ನಿಸಿದ ಆರೋಪಿ ಹಾಗೂ ಬಾಲಕಿ ಸಂಬಂಧಿ ಸಂತೋಷ್(50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
ಕೆಲವು ದಿವಸಗಳ ಹಿಂದೆ ಘಟನೆ ನಡೆದಿದ್ದು,ಬಾಲಕಿ ತಂದೆ ಮತ್ತು ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭ ಮನೆಗೆ ಆಗಮಿಸಿದ್ದ ಸಂತೋಷ್ ಬಾಲಕಿಯನ್ನು ಬಿಗಿದಪ್ಪಿ ಕಿರುಕುಳ ನೀಡಿದ್ದು, ಈ ಮಧ್ಯೆ ಬಾಲಕಿ ಆತನ ಕೈಯಿಂದ ಪಾರಗಿಬೊಬ್ಬಿಡುತ್ತಾ ಮನೆಯಿಮದ ಹೊರಕ್ಕೆಓಡಿದ್ದಳು. ಈ ಸಂದರ್ಭ ಆಸುಪಾಸಿನವರು ಆಗಮಿಸುತ್ತಿದ್ದಂತೆ ಸಂತೋಷ್ ಪರಾರಿಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

