ಕಾಸರಗೋಡು: ಅಪಘಾತದಲ್ಲಿ ಮೃತಪಟ್ಟ ಬೇಕಲ್‍ನ ಆನಂದು ಅವರ ಕುಟುಂಬಕ್ಕೆ ಮತ್ಸ್ಯಫೆಡ್ ವತಿಯಿಂದ ಮಂಜೂರುಗೊಳಿಸಿದ 10 ಲಕ್ಷ ರೂ.ಗಳ ವಿಮಾ ಮೊತ್ತವನ್ನು ಶಾಸಕ ಸಿ.ಎಚ್. ಕುಞಂಬು ಆನಂದು ಕುಟುಂಬದವರಿಗೆ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಮತ್ಸ್ಯಫೆಡ್ ನಿರ್ದೇಶಕ ಹಾಗೂ ನಗರಸಭಾ ಅಧ್ಯಕ್ಷ ವಿ.ವಿ ರಮೇಶನ್ ಅಧ್ಯಕ್ಷತೆವಹಿಸಿದ್ದರು. ನಗರಸಭಾ ವಾರ್ಡ್ ಸದಸ್ಯ ಶಂಭು ಕೆ, ಮತ್ಸ್ಯಫೆಡ್ ವ್ಯವಸ್ಥಾಪಕ ಶರೀಫ್, ಯೋಜನಾಧಿಕಾರಿ ಜಸ್ಲಿ ಪೀಟರ್, ಕಣ್ಣನ್ ಕಾರ್ನವರ್, ಮುತ್ತೋತಿ ಆಯತಾರ್, ವಲಿಯ ಕಡವನ್, ಬೇಕಲ ಶ್ರೀ ಕುರುಂಬಾ ಭಗವತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಅಜಯ್ ಬಾಲಕೃಷ್ಣನ್ ಮತ್ತು ಮೀನುಗಾರರ ಒಕ್ಕೂಟ (ಸಿಐಟಿಯು) ರಾಜ್ಯ ಸಮಿತಿ ಸದಸ್ಯ ಪುರುಷೋತ್ತಮನ್ ವಿ ಉಪಸ್ಥಿತರಿದ್ದರು. ಬಿ.ಕೆ. ಕುಮಾರನ್ ಸ್ವಾಗತಿಸಿದರು. ಬಿ.ಭಾಸ್ಕರನ್ ವಂದಿಸಿದರು.


