ಕಾಸರಗೋಡು: ಚೆನ್ನೈ ಹಿಂದೂಸ್ತಾನ್ ತಾಂತ್ರಿಕ ಮತ್ತು ವಿಜ್ಞಾನ ಸಂಸ್ಥೆಯಲ್ಲಿ ನಡೆದ 39ನೇ ಅಂತರ್ ವಿಶ್ವವಿದ್ಯಾಲಯ ದಕ್ಷಿಣ ವಲಯ ಯುವಜನೋತ್ಸವದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್ ಐದನೇ ಸ್ಥಾನ ಪಡೆದುಕೊಂಡಿತು.
ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ ಮತ್ತು ಲಕ್ಷದ್ವೀಪದ 28 ವಿಶ್ವವಿದ್ಯಾಲಯಗಳು ಯುವಜನೋತ್ಸವದಲ್ಲಿ ಭಾಗವಹಿಸಿದ್ದವು. ಪಥಸಂಚಲನ ವಿಭಾಗದಲ್ಲಿ ಪ್ರಥಮ, ಶಾಸ್ತ್ರೀಯ ನೃತ್ಯ, ಕೊಲಾಜ್, ಇಂಗ್ಲಿಷ್ ಭಾಷಣ ಮತ್ತು ಸ್ಕಿಟ್‍ನಲ್ಲಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿತು. ಎರಡು ವಿಭಾಗಗಳಲ್ಲಿ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದುಕೊಂಡಿದೆ. ವಿಶ್ವವಿದ್ಯಾನಿಲಯವನ್ನು 44 ವಿದ್ಯಾರ್ಥಿಗಳು ಸೇರಿದಂತೆ 58 ಜನರ ತಂಡ ಪ್ರತಿನಿಧಿಸಿತು. ಸಾಂಸ್ಕøತಿಕ ಸಂಯೋಜಕಿ ಡಾ. ಕೆ. ಶ್ರವಣ, ಸಹಾಯಕ ಸಾಂಸ್ಕೃತಿಕ ಸಂಯೋಜಕಿ ಡಾ. ಬಿಂದು ಟಿ.ವಿ., ಡಾ. ರಾಜೇಂದ್ರ ಬೈಕಾಡಿ ಮತ್ತು ಅತಿಥಿ ಉಪನ್ಯಾಸಕ ವಿಷ್ಣು ಪವಿತ್ರನ್ ನೇತೃತ್ವನೀಡಿದ್ದರು. ಉತ್ತಮ ಫಲಿತಾಂಶ ದಾಖಲಿಸಿದ ತಂಡಕ್ಕೆ ವಿಶ್ವವಿದ್ಯಾಲಯದಲ್ಲಿ ಸ್ವಾಗತ ಸಮರಂಭ ಆಯೋಜಿಸಲಾಯಿತುಸೀ ಸಂದರ್ಭ ವಿಜೇತ ವಿದ್ಯಾರ್ಥಿಗಳನ್ನು ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಅಭಿನಂದಿಸಿದರು. ರಿಜಿಸ್ಟ್ರಾರ್ ಡಾ. ಆರ್. ಜಯಪ್ರಕಾಶ್, ಡೀನ್ ಅಕಾಡೆಮಿಕ್ ಪೆÇ್ರ. ಜೋಸೆಫ್ ಕೊಯಿಪಲ್ಲಿ ಮತ್ತು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ ಉಪಸ್ಥಿತರಿದ್ದರು.


