ಪೆರ್ಲ: ಅಂಚೆ ಇಲಾಖೆ ಉಕ್ಕಿನಡ್ಕ ಶಾಖಾ ಕಚೇರಿಯಲ್ಲಿ ಸುಧೀರ್ಘ 42 ವರ್ಷಗಳ ಕಾಲ ಪೆÇೀಸ್ಟ್ ಮೆನ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಪ್ಪಯ ಮಣಿಯಾಣಿ ಸಪರ್ಂಗಳ ಅವರಿಗೆ ಬೀಳ್ಕೊಡುಗೆ ಸಮಾರಂಭ ಉಕ್ಕಿನಡ್ಕ ಅಂಚೆ ಕಚೇರಿಯಲ್ಲಿ ಜರುಗಿತು.
ಉಕ್ಕಿನಡ್ಕ ಅಂಚೆ ಕಚೇರಿ ಹಾಗೂ ಊರಿನ ಎಲ್ಲಾ ಹಿತೈಷಿಗಳ ವತಿಯಿಂದ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಮಧುಸೂಧನ್, ಅಂಚೆ ಇಲಾಖೆ ಮೈಲ್ ಓವರ್‍ಸೀಯರ್ ಸರಸ್ವತೀ, ನಿವೃತ್ತ ಬ್ಯಾಂಕ್ ಉದ್ಯೋಗಿ ತಾರಾನಾಥ ಪೈ ಉಕ್ಕಿನಡ್ಕ, ರಾಮದಾಸ ಶೆಟ್ಟಿ ಉಕ್ಕಿನಡ್ಕ, ಪೆರಿಯ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಹೆಡ್ ಕ್ಲರ್ಕ್ ನಾರಾಯಣ ನಾಯಕ ಗುರುವಾರೆ , ಉಕ್ಕಿನಡ್ಕ ಅಯ್ಯಪ್ಪ ಸೇವಾ ಸಮಿತಿ ಕಾರ್ಯದರ್ಶಿ ಹರೀಶ್ ಗುರುವಾರೆ, ಗೋವಿಂದ ಮಣಿಯಾಣಿ ಸಪರ್ಂಗಳ, ಇಸ್ಮಾಯಿಲ್ ಉಕ್ಕಿನಡ್ಕ, ರಾಬರ್ಟ್ ಡಿ.ಸೋಜ, ಇಂದಿರಾ ಶೆಟ್ಟಿ ಉಪಸ್ಥಿತರಿದ್ದರು. ಬ್ರಾಂಚ್ ಪೆÇೀಸ್ಟ್ ಮಾಸ್ಟರ್ ದಾಮೋದರ್ ಬಜಕೂಡ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿರು. ನಾರಾಯಣ ನಾಯಕ್ ಗುರುವಾರೆ ವಂದಿಸಿದರು.


