ಮಂಜೇಶ್ವರ: ನಾಗರಿಕ ಸ್ಪಂದನಾ ಕಾರ್ಯಕ್ರಮದ ಅಭಿವೃದ್ಧಿ ಮತ್ತು ಕಲ್ಯಾಣ ಅಧ್ಯಯನ ಭಾಗವಾಗಿ ಮಂಜೇಶ್ವರ ಕ್ಷೇತ್ರ ಕ್ರಿಯಾಸೇನೆಯ ಸದಸ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಗರಿಕ ಸ್ಪಂದನಾ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಸಂಪನ್ಮೂಲ ವ್ಯಕ್ತಿ ಎಚ್. ಕೃಷ್ಣ, ಕೇರಳ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕ ಸಿ. ರಾಜಾರಾಮ ಮತ್ತು ವಿಷಯಾಧಾರಿತ ತಜ್ಞ ಎ. ಅನಿಲಾ ವಿವಿಧ ವಿಷಯಗಳ ಕುರಿತು ತರಗತಿಗಳನ್ನು ನಡೆಸಿದರು.
ಬ್ಲಾಕ್ ಪಂಚಾಯತಿ ಅಧ್ಯಕ್ಷ ಸೈಪುಲ್ಲಾ ತಂಙಳ್, ಮಂಜೇಶ್ವರ ಮಂಡಲದ ಸಹಕಾರಿ ಸಹಾಯಕ ನೋಂದಣಾಧಿಕಾರಿ ಕೆ. ನಾಗೇಶ್, ಬ್ಲಾಕ್ ಅಭಿವೃದ್ಧಿ ಅಧಿಕಾರಿ ಕೆ. ಹರೀಶ್, ಮತ್ತು ಪಂಚಾಯತಿ ಉಸ್ತುವಾರಿ ಅಧಿಕಾರಿಗಳಾದ ಕೆ. ಚಂದ್ರಶೇಖರನ್, ದಾಸಪ್ಪ ಶೆಟ್ಟಿ ಮತ್ತು ಅಹ್ಮದ್ ಹುಸೇನ್ ಮೊದಲ ಹಂತದ ತರಬೇತಿಯಲ್ಲಿ ಮಾತನಾಡಿದರು. ವಿವಿಧ ಪಂಚಾಯತಿಗಳಿಂದ ಸುಮಾರು 20 ಮಂದಿ ಕ್ರಿಯಾಸೇನೆಯ ಸದಸ್ಯರು ಭಾಗವಹಿಸಿದ್ದರು.

