ಕಾಸರಗೋಡು: ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಅಧೀನದಲ್ಲಿ ಉದುಮ ತ್ರಿಕ್ಕನ್ನಾಡಿನಲ್ಲಿ ಸ್ಥಾಪಿಸಿರುವ ಶಿವಜ್ಯೋತಿ ಭವನದ ಉದ್ಘಾಟನೆ ಜ. 4ರಂದು ಬೆಳಗ್ಗೆ 11ಕ್ಕೆ ನಡೆಯುವುದು. ರಾಜಯೋಗಿ ಬ್ರಹ್ಮಕುಮಾರ ಡಾ.ಬಸವರಾಜ ರಾಜಋಷಿ ಭವನವನ್ನು ಉದ್ಘಾಟಿಸುವರು.
ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾಜಿ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಚ್. ಕುಞಂಬು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ವಿ. ರಾಜೇಂದ್ರನ್, ಗ್ರಾಪಂ ಸದಸ್ಯ ಪಿ.ಜಯ ಸಂಧ್ಯಾ, ವಕೀಲ ಕೆ. ಶ್ರೀಕಾಂತ್, ರಾಜಲಕ್ಷ್ಮಿ ಸುರೇಂದ್ರನಾಥ್, ವಿ.ಬಾಲಕೃಷ್ಣನ್ ನಾಯರ್, ವಿ.ಆರ್. ವಿದ್ಯಾಸಾಗರ್, ಆನಂದಮೂರ್ತಿ, ಬಿ.ಕೆ. ಶಿವದಾಸ್ ಮೊದಲಾದವರು ಪಾಲ್ಗೊಳ್ಳುವರು.

