ಸಮರಸ ಚಿತ್ರಸುದ್ದಿ: ಬದಿಯಡ್ಕ: ಜಿವಿಎಚ್‍ಎಸ್‍ಎಸ್ ಮೊಗ್ರಾಲಿನಲ್ಲಿ ನಡೆದ ಕಾಸರಗೋಡು ರೆವೆನ್ಯೂ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಹೈಯರ್ ಸೆಕೆಂಡರಿ ವಿಭಾಗದ ಶಾಸ್ತ್ರೀಯ ಸಂಗೀತ , ವಯಲಿನ್ ಓರಿಯಂಟಲ್, ಕನ್ನಡ ಕಂಠಪಾಠಗಳಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು ಎಸ್‍ಎಪಿಎಚ್‍ಎಸ್‍ಎಸ್ ಅಗಲ್ಪಾಡಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ಅನ್ವಿತಾ ತಲ್ಪಣಾಜೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಶಾಸ್ತ್ರೀಯ ಸಂಗೀತದಲ್ಲಿ ಡಾ.ಅನೀಶ್ ವಿ ಭಟ್ ಪುತ್ತೂರು ಹಾಗೂ ವಯಲಿನ್‍ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು ಇವರ ಶಿಷ್ಯೆ, ಅಧ್ಯಾಪಕ ದಂಪತಿಗಳಾದ ಶಿವಶಂಕರ ಭಟ್ ತಲ್ಪಣಾಜೆ ಹಾಗೂ ಸುಧಾವಾಣಿ ಇವರ ಪುತ್ರಿಯಾಗಿರುತ್ತಾಳೆ.

-%20Anvitha.jpg)
