ಮಧೂರು: ಮಧುವಾಹಿನಿ ಫಾರ್ಮರ್ ಪ್ರೊಡ್ಯೂಸರ್ ಮತ್ತು ಕೋ ಓಪರೇಟಿವ್ ಮಾರ್ಕೆಟಿಂಗ್ ಸೊಸೈಟಿ ಮಧೂರು ಇದರ 2025-30ನೇ ಅವಗೆ ನೂತನ ಆಡಳಿತ ಮಂಡಳಿಯ ಅವಿರೋಧ ಆಯ್ಕೆ ನಡೆಯಿತು.
ಮಧೂರಿನಲ್ಲಿರುವ ಸಂಘದ ಕಛೇರಿಯಲ್ಲಿ ಜರಗಿದ ಸಭೆಯಲ್ಲಿ ಇಲಾಖಾಧಿಕಾರಿ ಅನೀಶ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಪದ್ಮರಾಜ ಪಟ್ಟಾಜೆ, ಉಪಾಧ್ಯಕ್ಷರಾಗಿ ಶೀನ ಶೆಟ್ಟಿ, ನಿರ್ದೇಶಕರಾಗಿ ಸುಕುಮಾರನ್ ಕೆ., ವಿನೋದ್ ಕುಮಾರ್ ಎಸ್., ಶಿವಪ್ರಸಾದ್ ರೈ ಟಿ., ಶಾರದಾ ಎಸ್.ಎನ್. ಭಟ್, ನರಸಿಂಹ ಮಯ್ಯ ಎಂ, ಅನುಪಮಾ, ಅಶ್ವಿನಿ ಕೆ.ಎಂ., ಗಣೇಶ್ ಕುಮಾರ್, ಕೃಷ್ಣ ಪಿ. ಸದಸ್ಯರಾಗಿ ಆಯ್ಕೆಯಾದರು. ಸಹಕಾರ ಭಾರತಿಯ ರಾಜ್ಯಸಮಿತಿ ಸದಸ್ಯ ಐತ್ತಪ್ಪ ಮವ್ವಾರು ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನು ಅಭಿನಂದಿಸಿದರು. ಸಹಕಾರ ಭಾರತಿ ತಾಲೂಕು ಕಾರ್ಯದರ್ಶಿ ಗಣಪತಿ ಪ್ರಸಾದ ಕುಳಮರ್ವ, ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಧಾಕೃಷ್ಣ ರೈ ಮಡ್ವ, ಸಿಇಒ ಭರತ್ ಉಪಸ್ಥಿತರಿದ್ದರು.


