ಕಾಸರಗೋಡು: ಎಣ್ಮಕಜೆ ಗ್ರಾಮ ಪಂ. ಸದಸ್ಯ, ಸಿಪಿಐಎಂ ಮುಖಂಡ ಸುಧಾಕರ ಮಾಸ್ಟರ್ ನಡೆಸಿದ್ದಾನೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ಥೆ ಮಹಿಳೆಯ ರಹಸ್ಯ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.
ಸಂತ್ರಸ್ಥ ಮಹಿಳೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕಾಸರಗೋಡು ಮಹಿಳಾ ಪೆÇಲೀಸ್ ಠಾಣೆಯ ಎಸ್. ಐ. ಕೆ. ಅಜಿತಾ ಅವರು ಸಂತ್ರಸ್ಥೆಯಿಂದ ಈ ಹೇಳಿಕೆ ದಾಖಲಿಸಿಕೊಂಡಿದ್ದು, ನಂತರ ಸಂತ್ರಸ್ಥೆಯನ್ನು ನ್ಯಾಯಾಲಯಕ್ಕೂ ಹಾಜರು ಪಡಿಸಿ ರಹಸ್ಯ ಹೇಳಿಕೆ ದಾಖಲಿಸಿಕೊಳ್ಳಲಾಯಿತು.

