ಪೆರ್ಲ: ಎಣ್ಮಕಜೆ ಪಂಚಾಯಿತಿಯ ಬೆದ್ರಂಪಳ್ಳ ಸನಿಹ ನಡುಬೈಲು ಎಂಬಲ್ಲಿ ಹೆಂಚು ಹಾಸಿನ ಮನೆಗೆ ಬೆಂಕಿ ತಗುಲಿ ಬಹುತೇಕ ಉರಿದು ನಾಶಗೊಂಡಿದ್ದು, ಭಾರೀ ನಷ್ಟ ಸಂಭವಿಸಿದೆ. ಪೆರ್ಲದಲ್ಲಿ ಟ್ಯಾಕ್ಸಿ ವಾಹನ ಹೊಂದಿರುವ ರಮೇಶ್ಚಂದ್ರ ರೈ ಅವರ ಮನೆ ಬೆಂಕಿಗಾಹುತಿಯಾಗಿದೆ.
ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಆಕಸ್ಮಿಕಕ್ಕೆ ಕಾರಣವೆನ್ನಲಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ಶಮನಗೊಳಿಸಿದ್ದಾರೆ. ರಮೇಶ್ಚಂದ್ರ ರೈ ಅವರು ತರವಾಡು ಮನೆಗೆ ತೆರಳಿದ್ದು, ಇವರ ಪತ್ನಿ ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ತೆರಳಿದ್ದರಿಂದ ಜೀವಾಪಾಯದಿಂದ ಪಾರಾಗಿದ್ದರು. ವಿದ್ಯುತ್ ಸಲಕರಣೆ, ಪೀಠೋಪಕರಣ, ಬೆಲೆಬಾಳುವ ವಸ್ತುಗಳು, ಬಟ್ಟೆಬರೆ ಜಾಗ, ಮನೆ, ವಾಹನಗಳ ದಾಖಲೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.


