ಬದಿಯಡ್ಕ: ಉದ್ಯೋಗ ಕೊಡಿಸುವ ಭರವಸೆ ನೀಡಿ ಮೂರುವರೆ ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ನಿವಾಸಿ ಪ್ರತೀಶ್ ಸಿ. ಸೋಮನ್ ಹಾಗೂ ನಾರ್ತ್ ದೆಹಲಿಯ ಸೋಮ್ ಪ್ರಕಾಶ್ ಎಂಬವರ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮುಗು ಪಳ್ಳ ಹೌಸ್ ನಿವಾಸಿ ಜೋಯೆಲ್ ಡಿ.ಸೋಜ ಅವರ ದೂರಿನ ಮೇರೆಗೆ ಈ ಕೇಸು. ಮೋಂಡಿಸ್ ಗ್ರೋಯಿಲ್ ಇಲೆಕ್ಟ್ರಿಕಲ್ ಕನ್‍ಸ್ಟ್ರಕ್ಷನ್ ಎಂಬ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಜೊಡುವ ಭರವಸೆಯೊಂದಿಗೆ 2024ರ ಮಾರ್ಚ್ 1ರಿಂದ 2025 ಜೂ. 12ರ ಕಾಲಾವಧಿಯಲ್ಲಿ ಬ್ಯಾಂಕ್ ಟ್ರಾನ್ಸಾಕ್ಷನ್ ಮೂಲಕ ಹಾಗೂ ನೇರವಾಗಿ ತನ್ನಿಂದ 3.50ಲಕ್ಷ ರೂ. ಪಡೆದು, ಕೆಲಸ ನೀಡದೆ, ಪಡೆದ ಹಣವನ್ನೂ ವಾಪಾಸು ಮಾಡದೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಜೋಯೆಲ್ ಡಿ.ಸೋಜ ತಿಳಿಸಿದ್ದಾರೆ.

