ಮಂಜೇಶ್ವರ: ಮಂಜೇಶ್ವರ ಪೆÇಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿ ತೌಡುಗೋಲಿಯಲ್ಲಿ ಗೃಹಿಣಿಯ ಕೊರಳಿನಲ್ಲಿದ್ದ ಶಾಲು ಗ್ರೈಂಡರ್‍ಗೆ ಸಿಲುಕಿ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. ಇಲ್ಲಿನ ಕಲ್ಮಿಂಜ ನಿವಾಸಿ ಅಬ್ದುಲ್ ಖಾದರ್ ಎಂಬವರ ಪತ್ನಿ ಪತ್ನಿ ಮೈಮೂನ( 40) ಮೃತಪಟ್ಟ ಮಹಿಳೆ.
ಮೈಮೂನ ಅವರು ಗ್ರೈಂಡರ್‍ನಲ್ಲಿ ಪದಾರ್ಥಕ್ಕಾಗಿ ಮೆಣಸು ಕಡೆಯುವ ಸಂದರ್ಭ ಕತ್ತಿನಲ್ಲಿದ್ದ ಶಾಲು ಸಿಲುಕಿ ಈ ಅನಾಹುತ ಸಂಭವಿಸಿದೆ. ಅಪಾಯಕ್ಕೆ ಸಿಲುಕಿದ್ದ ಮೈಮುನಾ ಅವರನ್ನು ತಕ್ಷಣ ಕೊಣಾಜೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾಣೆ ಪೆÇಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

