ಕಾಸರಗೋಡು: ಹೊಸದಾಗಿ ಆಯ್ಕೆಯಾದ ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿಯ ಸಭೆ ಜಿಪಂ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕೆ. ಕೆ. ಸೋಯಾ, ಜಿಲ್ಲಾ ಪಂಚಾಯತ್ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಕೃಷ್ಣನ್ ಓಕ್ಲಾವ್, ಆರೋಗ್ಯಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ. ಮನು, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ರೀನಾ ಥಾಮಸ್ ಮತ್ತು ಸದಸ್ಯರಾದ ಜೆ. ಎಸ್. ಸೋಮಶೇಖರ, ಡಾ. ಪಿ. ಸೆರೆನಾ ಸಲಾಂ, ಕೆ.ಸಬೀಶ್, , ಟಿ.ವಿ.ರಾಧಿಕಾ, ಬಿ.ಭಾಸ್ಕರ ಮಣಿಯಾಣಿ, ಎ.ಹರ್ಷದ್ ವಕ್ರ್ಕಾಡಿ, ಓ.ವತ್ಸಲಾ, ರಾಮಪ್ಪ ಮಂಜೇಶ್ವರ, ಬಿನ್ಸಿ ಜೈನ್, ಎಸ್.ಸುಕುಮಾರಿ ಶ್ರೀಧರನ್, ಜಸ್ನಮನಾಫ್, ಅಜೀಜ್ ಕಳತ್ತೂರು ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಜಾ ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

