ಮಂಜೇಶ್ವರ: ವರ್ಕಾಡಿ ಬೋಳದಪದವು ಶ್ರೀ ಬ್ರಹ್ಮ ಮುಗೇರ ಮತ್ತು ಕೊರಗಜ್ಜ-ಗುಳಿಗ ದೈವ ಸಾನಿಧ್ಯಗಳ ನೇಮೋತ್ಸವ ಮಾ. 29ರಂದು ಜರುಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕ್ಷೇತ್ರ ವಠಾರದಲ್ಲಿ ಜರುಗಿತು.
ವರ್ಕಾಡಿ ಸಂತೋಷ್ ತಂತ್ರಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು. ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ರವಿ ಮುಡಿಮಾರು, ಕೋಶಾಧಿಕಾರಿ ಮನೋಜ್ ಭಂಡಾರ ಮನೆ ವರ್ಕಾಡಿ, ಗೌರವ ಸಲಹೆಗಾರ ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ಕ್ಷೇತ್ರದ ಸೇವಾ ಸಮಿತಿಯ ಗೌರವಾಧ್ಯಕ್ಷ ಶೀನ ಬೋಳದ ಪದವು, ಪಚ್ಚಿಲಂಪಾರೆ ಬ್ರಹ್ಮ ಮುಗೇರ ದೈವಸ್ಥಾನದ ಧರ್ಮದರ್ಶಿ ಬಾಬು ಪಚ್ಚಿಲಂಪಾರೆ, ನಿವೃತ್ತ ಶಿಕ್ಷಕ ರಾಮ ಮಾಸ್ಟರ್ ದಡ್ಡಂಗಡಿ, ಸೇವಾಸಮಿತಿ ಅಧ್ಯಕ್ಷ ಸಂಜೀವ ಬೋಳದಪದವು, ತನ್ನಿಮಾನಿಗ ಮಹಿಳಾ ಸಮಿತಿಯ ಅಧ್ಯಕ್ಷೆ ಲಲಿತ ಬೋಳದಪದವು, ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮಾ 29ರಂದು ಬೆಳಿಗ್ಗೆ 9ಕ್ಕೆ ಸ್ಥಳ ಶುದ್ದಿ, ಚಪ್ಪರ ಮಹೂರ್ತ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಸಂಜೆ 5ಕ್ಕೆ ಭಂಡಾರ ಏರಿ ಗುಳಿಗ ಕೋಲ, 8.30ಕ್ಕೆ ಕೊರಗಜ್ಜ ಕೋಲ, ರಾತ್ರಿ 10ಕ್ಕೆ ಬ್ರಹ್ಮ ಮುಗೇರ ತನ್ನಿಮಾನಿಗ ನೇಮೋತ್ಸವ ನಡೆಯಲಿರುವುದು.


