ಕಾಸರಗೋಡು: ಕಣಿಪುರ ಶೀ ದೇವಸ್ಥಾನ ಉತ್ಸವದ ಅಂಗವಾಗಿ ನಡೆದ ಸುಡುಮದ್ದು ಸಿಡಿಸಿರುವುದರ ವಿರುದ್ಧ ಕೇಸು ದಾಖಲಿಸಿದ ಪೆÇಲೀಸರ ಕ್ರಮ ಖಂಡನೀಯ ಮತ್ತು ಹಿಂದೂ ಸಮುದಾಯದ ಸಂಪ್ರದಾಯ ಕೆಡಹುವ ಹುನ್ನಾರವಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ.
ಹೆಚ್ಚಿನ ದೇವಾಲಯಗಳಲ್ಲಿ, ಉತ್ಸವದ ಜೊತೆಗೆ ಪಟಾಕಿ ನಿಯಮಿತವಾಗಿ ಬಳಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ದೇವಾಲಯದ ಅಧಿಕಾರಿಗಳು ಪಟಾಕಿ ಸಿಡಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಪೆÇಲೀಸರು ಇದನ್ನು ತಡೆಯಲು ಪ್ರಯತ್ನಿಸುತ್ತಾ ಬರುತ್ತಿರುವುದಲ್ಲದೆ, ಕೇರಳದಲ್ಲಿ ಪೆÇಲೀಸರು ಹಿಂದೂ ದೇವಾಲಯಗಳಲ್ಲಿನ ಆಚರಣೆಗಳು ಮತ್ತು ಹಿಂದೂಗಳ ನಂಬಿಕೆಗಳ ವಿರುದ್ಧ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ. ಕಾನೂನು ಉಲ್ಲಂಘಿಸುವ ಮೂಲಕ ಇತರ ಧರ್ಮದ ಜನರು ನಡೆಸುವ ಆಚರಣೆಗಳ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ತೋರದ ಪೆÇಲೀಸರು, ರಾಜ್ಯ ಮತ್ತು ಜಿಲ್ಲಾಡಳಿತ ಹಿಂದೂ ಸಂಪ್ರದಾಯಗಳ ವಿರುದ್ಧ ಟಾರ್ಗೆಟ್ ಮಾಡುವ ಮೂಲಕ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆಸುತ್ತಿರುವುದಾಗಿ ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

