ಮಂಜೇಶ್ವರ: ಮಾರಕ ಎಂಡಿಎಂಎ ಸಾಗಾಟದ ಮಧ್ಯೆ ಪೊಲೀಸರನ್ನು ಕಂಡು ಸ್ಕೂಟರ್ ಬಿಟ್ಟು ಪರಾರಿಯಾಗಿದ್ದ ಉಪ್ಪಳ ಮೂಸೋಡಿ ನಿವಾಸಿ ಅಬ್ದುಲ್ ಮಜೀದ್ ಎಂಬಾತನನ್ನು ಮಂಜೇಶ್ವರ oಣೆ ಪೊಲಿಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜ.8ರಂದು ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ "ಡಾನ್ಸಾಪ್'ತಂಡ ಉಪ್ಪಳ ಮೂಸೋಡಿಯಲ್ಲಿ ನಡೆಸಿದ ವಾಹನ ತಪಾಸಣೆ ಸಂದರ್ಭ ಸ್ಕೂಟರಲ್ಲಿ ಆಗಮಿಸಿದ ಈತ, ಪೊಲೀಸರನ್ನು ಕಂಡು ಸ್ಕೂಟರ್ ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದನು. ನಂತರ ಪೊಲೀಸರು ತಪಾಸಣೆ ನಡೆಸಿದಾಗ ಸ್ಕುಟರಲ್ಲಿ 1.32ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿತ್ತು.

