ಕಾಸರಗೋಡು: ಅತ್ಯುತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕವನ್ನು ಕಾಸರಗೋಡು ಅಗ್ನಿಶಾಮಕ ಠಾಣೆಯ ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ವಿ.ಎನ್.ವೇಣುಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಚೆರುವತ್ತೂರು ಕನ್ನಡಿಯಪ್ಪಾರ ವಲಿಯಪರಂಬ ನಿವಾಸಿಯಾಗಿರುವ ವಿ.ಎನ್ ವೇಣುಗೋಪಾಲ್ ಸೇರಿದಂತೆ ಅಗ್ನಿಶಾಮಕ ಸೇವಾ ವಿಭಾಗದಲ್ಲಿ ರಾಜ್ಯದ ನಾಲ್ವರು ಅಧಿಕಾರಿಗಳನ್ನು ಪದಕಕ್ಕೆ ಆಯ್ಕೆ ಮಾಡಲಾಗಿದೆ. 2004 ರಲ್ಲಿ ಮಲಪ್ಪುರಂ ಅಗ್ನಿಶಾಮಕ ಠಾಣೆಯಲ್ಲಿ 6 ತಿಂಗಳ ಮೂಲ ತರಬೇತಿ ಹಾಗೂ ಪಾಲಕ್ಕಾಡ್ ಠಾಣೆಯಲ್ಲಿ 6 ತಿಂಗಳ ನಿಲ್ದಾಣ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಪಾಲಕ್ಕಾಡ್‍ನ ಅಲತ್ತೂರು ಅಗ್ನಿಶಾಮಕ ಠಾಣೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ತ್ರಿಕರಿಪುರ, ಕಾಞಂಗಾಡ್, ಉಪ್ಪಳ, ಮತ್ತು ಪೆರವೂರುಗಳಲ್ಲಿ ಸೇವೆ ಸಲ್ಲಿಸಿರುವಿವರು ಪ್ರಸಕ್ತ ಕಾಸರಗೋಡು ಅಗ್ನಿಶಾಮಕ ದಳ ಕಚೇರಿಯಲ್ಲಿಕರ್ತವ್ಯನಿರ್ವಹಿಸುತ್ತಿದ್ದಾರೆ.

