HEALTH TIPS

ಹಾಲು ನಿಜವಾಗಿಯೂ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆಯೇ? ಇಲ್ಲಿದೆ ಸ್ಪಷ್ಟ ಮಾಹಿತಿ

ಹಾಲು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರ ವರೆಗೆ ಒಂದು ಹೊತ್ತಾದರೂ ಹಾಲು ಕುಡಿಯುತ್ತಾರೆ. ಇದು ಬಹಳ ಸಾಮಾನ್ಯ. ದೇಹದ ಬೆಳವಣಿಗೆ ಮತ್ತು ಶಕ್ತಿ ನೀಡುವುದಕ್ಕೆ ಹಾಲು ಪೂರಕ ಎಂದು ಹೇಳಲಾಗುತ್ತದೆ.

ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಹೊರತಾಗಿಯೂ, ಹಾಲನ್ನು ಇನ್ನೂ ಪೌಷ್ಟಿಕಾಂಶದ ಮೂಲವೆಂದು ಪರಿಗಣಿಸಲಾಗುತ್ತದೆ. ಅದರಲ್ಲಿಯೂ ಮೂಳೆ ಮತ್ತು ಹಲ್ಲುಗಳ ಆರೋಗ್ಯದ ವಿಷಯಕ್ಕೆ ಬಂದಾಗ, ಹಾಲು ಮೊದಲು ನೆನಪಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಯಾಲ್ಸಿಯಂ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಜನ ತಮ್ಮ ಆಹಾರದ ಬಗ್ಗೆ ಮೊದಲಿಗಿಂತ ಹೆಚ್ಚು ಜಾಗರೂಕರಾಗುತ್ತಿದ್ದಾರೆ. ಆದರೆ ಪ್ರತಿದಿನ ಹಾಲು ಕುಡಿಯುವುದು ದೇಹದ ಕ್ಯಾಲ್ಸಿಯಂ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆಯೇ ಅಥವಾ ಇಲ್ಲವೇ, ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಹಾಲು ನಿಜವಾಗಿಯೂ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆಯೇ?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಡಾ. ಎಲ್.ಎಚ್. ​​ಘೋಟೇಕರ್ ಅವರು ಹೇಳುವ ಪ್ರಕಾರ, ಒಂದು ಲೋಟ ಹಾಲು ಕುಡಿಯುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ದೊರೆಯುತ್ತದೆ, ಅದನ್ನು ಸುಲಭವಾಗಿ ದೇಹ ಹೀರಿಕೊಳ್ಳುತ್ತದೆ. ಹಾಲಿನಲ್ಲಿರುವ ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿ, ಹಾಲು ಮೂಳೆ ಮತ್ತು ಹಲ್ಲುಗಳ ಬಲಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಪ್ರತಿಯೊಬ್ಬರ ಕ್ಯಾಲ್ಸಿಯಂ ಅಗತ್ಯತೆ ಒಂದೇ ಆಗಿರುವುದಿಲ್ಲ. ಇದು ವಯಸ್ಸು, ಲಿಂಗ, ಜೀವನಶೈಲಿ ಮತ್ತು ಆರೋಗ್ಯವನ್ನು ಅವಲಂಬಿಸಿರುತ್ತದೆ. ದೇಹ ಹೆಚ್ಚು ಕ್ಯಾಲ್ಸಿಯಂ ಕೊರತೆಯನ್ನು ಹೊಂದಿದ್ದರೆ, ಹಾಲು ಮಾತ್ರ ಕುಡಿದರೆ ಸಾಕಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಹಾಲಿನ ಜೊತೆಗೆ ಮೊಸರು, ಚೀಸ್, ಹಸಿರು ತರಕಾರಿಗಳು, ಎಳ್ಳು ಮತ್ತು ಬಾದಾಮಿಯಂತಹ ಆಹಾರಗಳನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಇದು ದೇಹಕ್ಕೆ ವಿವಿಧ ಮೂಲಗಳಿಂದ ಕ್ಯಾಲ್ಸಿಯಂ ಅನ್ನು ಒದಗಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ, ಹಾಲು ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ, ಆದರೆ ಸಮತೋಲಿತ ಆಹಾರವಿಲ್ಲದೆ ಕೊರತೆಯನ್ನು ಸಂಪೂರ್ಣವಾಗಿ ನೀಗಿಸುವುದು ಕಷ್ಟಕರ.

ದಿನಕ್ಕೆ ಎಷ್ಟು ಲೋಟ ಹಾಲು ಕುಡಿಯಬೇಕು?

ಆರೋಗ್ಯವಂತ ವಯಸ್ಕರು, ಸಾಮಾನ್ಯವಾಗಿ ದಿನಕ್ಕೆ 2 ಗ್ಲಾಸ್ ಅಥವಾ 400 ರಿಂದ 500 ಮಿಲಿ ಹಾಲು ಕುಡಿಯಬಹುದು. ಇದು ದೈನಂದಿನ ಕ್ಯಾಲ್ಸಿಯಂ ಅವಶ್ಯಕತೆಯನ್ನು ಪೂರೈಸುತ್ತದೆ. ಮಕ್ಕಳು, ಹದಿಹರೆಯದವರು ಮತ್ತು ಗರ್ಭಿಣಿಯರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಮಾಣವನ್ನು ಹೆಚ್ಚಿಸಬೇಕಾಗಬಹುದು. ಇನ್ನು, ಲ್ಯಾಕ್ಟೋಸ್ ಸಮಸ್ಯೆ ಇರುವವರು ಹಾಲು ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಅಗತ್ಯಕ್ಕಿಂತ ಹೆಚ್ಚು ಹಾಲು ಕುಡಿಯುವುದು ಪ್ರಯೋಜನಕಾರಿಯಲ್ಲ ಎಂಬುದನ್ನು ಮರೆಯಬಾರದು. ಇದೆಲ್ಲದರ ಜೊತೆಗೆ ಸಂಸ್ಕರಿತ ಆಹಾರ ಮತ್ತು ಸೋಡಾ ಸೇವನೆ ಮಾಡುವುದನ್ನು ಕಡಿಮೆ ಮಾಡಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries